2019-20 ರಲ್ಲಿ ಭಾರತದ ಜಿಡಿಪಿ ಶೇ.7.5 ಕ್ಕೆ ಜಿಗಿತ: ವಿಶ್ವಬ್ಯಾಂಕ್ ವಿಶ್ವಾಸ
ಭಾರತದ ಜಿಡಿಪಿ 2019-20 ನೇ ಸಾಲಿನಲ್ಲಿ ಶೇ.7.5 ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

Published On :
ವಾಷಿಂಗ್ ಟನ್: ಭಾರತದ ಜಿಡಿಪಿ 2019-20 ನೇ ಸಾಲಿನಲ್ಲಿ ಶೇ.7.5 ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ದಕ್ಷಿಣ ಏಷ್ಯಾ ಬೆಳವಣಿಗೆಗೆ ಸಂಬಂಧಿಸಿದಂತೆ ವರದಿ ಪ್ರಕಟಿಸಿರುವ ವಿಶ್ವಬ್ಯಾಂಕ್, ಮುಂದುವರೆದ ಬಲಿಷ್ಠ ಬಂಡವಾಳದಿಂದ ಭಾರತದ ಜಿಡಿಪಿ 19-20 ನೇ ಸಾಲಿನಲ್ಲಿ ಜಿಡಿಪಿ ಶೇ.7.5 ರಷ್ಟಾಗಲಿದೆ ಎಂದಿದೆ.
2018-19 ನೇ ಸಾಲಿನ ಜಿಡಿಪಿ ಬೆಳವಣಿಗೆ ಶೇ.7.2 ರಷ್ಟಿರಲಿದೆ. ಮೊದಲ ತ್ರೈಮಾಸಿಕದ ಅಂಕಿ-ಅಂಶಗಳ ಪ್ರಕಾರ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ. ಕೈಗಾರಿಕಾ ಬೆಳವಣಿಗೆ ಶೇ.7.9 ರಷ್ಟಿದ್ದರೆ, ಕೃಷಿ ಬೆಳವಣಿಗೆ ದೃಢವಾಗಿದ್ದು ಶೇ.4 ರಷ್ಟಿದೆ.
ಇನ್ನು ಇದೇ ವೇಳೆ 2018-19 ರ ಆರ್ಥಿಕ ವರ್ಷದ ಬಹುಪಾಲು ಹಣದುಬ್ಬರ ನಿಯಂತ್ರಣದಲ್ಲಿತ್ತು ಎಂದು ವರದಿ ಹೇಳಿದೆ. ಭಾರತದ ರಫ್ತು ಪ್ರಮಾಣವೂ ಸುಧಾರಣೆ ಕಂಡಿದ್ದು, ತೈಲ ಬೆಲೆ ಕಡಿಮೆಯಾಗಿದೆ. ಪರಿಣಾಮ ಚಾಲ್ತಿ ಖಾತೆ ಕೊರತೆ ದೇಶದ ಒಟ್ಟು ಆಂತರಿಕ ಉತ್ಪನ್ನದ ಜಿಡಿಪಿಯ ಶೇ.1.9 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


