ವಿಶ್ವಬ್ಯಾಂಕ್

"ಬಿಹಾರದ ಚುನಾವಣೆಗಾಗಿ ಕೇಂದ್ರದಿಂದ ವಿಶ್ವ ಬ್ಯಾಂಕ್ ನ 14,000 ಕೋಟಿ ರೂಪಾಯಿ ದುರುಪಯೋಗ"!
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿಯಲ್ಲಿ 1.25 ಕೋಟಿ ಮಹಿಳಾ ಮತದಾರರ ಖಾತೆಗೆ 10,000 ರೂ.ಗಳನ್ನು ವರ್ಗಾಯಿಸಲಾಗಿತ್ತು.

ಭಾರತ ಮತ್ತೊಂದು ಮೈಲಿಗಲ್ಲು: ತೀವ್ರ ಬಡತನದ ಪ್ರಮಾಣ ಭಾರಿ ಇಳಿಕೆ; ವಿಶ್ವಬ್ಯಾಂಕ್ ಮೆಚ್ಚುಗೆ!
2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದರು. ಈ ಪ್ರಮಾಣ 2011-12ರಲ್ಲಿ 344.47 ಮಿಲಿಯನ್ ಗೆ ಹೋಲಿಸಿದರೆ ಭಾರಿ ಇಳಿಕೆ ಕಂಡಿದೆ.

ಕಾರವಾರ: ಆಮೆಗಳ ರಕ್ಷಣೆ-ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಿಶ್ವಬ್ಯಾಂಕ್ ನಿಂದ 4 ಕೋಟಿ ರೂ. ನೆರವು
ಕಾರವಾರ ಬಳಿಯ ಕೋಡಿ ಭಾಗದ ಟ್ರೀ ಪಾರ್ಕ್ ಬಳಿ ಈ ಪುನರ್ವಸತಿ ಕೇಂದ್ರ ಬರಲಿದೆ. ಕೆ ಶೋರ್ ಯೋಜನೆಯಡಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ವಿಶ್ವಬ್ಯಾಂಕ್ ಅನುದಾನ ನೀಡಲಿದೆ.

ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಕ್ಕಾಗಿ ಕರ್ನಾಟಕಕ್ಕೆ 363 ಮಿಲಿಯನ್ ಡಾಲರ್ ಸಾಲ; ವಿಶ್ವಬ್ಯಾಂಕ್ ಅನುಮೋದನೆ!
ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ಮಂಡಳಿಯು ಕರ್ನಾಟಕಕ್ಕೆ 363 ಮಿಲಿಯನ್ ಡಾಲರ್ ಸಾಲವನ್ನು ಅನುಮೋದಿಸಿದೆ. ಇದರಿಂದ ರಾಜ್ಯದ ಎರಡು ಮಿಲಿಯನ್ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕದ ಮೂಲಕ ಅವರ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗಲಿದೆ.

ವಿಶ್ವ ಬ್ಯಾಂಕ್ ನಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು
ಭಾರತ ಮತ್ತು ವಿಶ್ವ ಬ್ಯಾಂಕ್ ಪರಸ್ಪರ 500 ಮಿಲಿಯನ್ ಡಾಲರ್ ನ ಪೂರಕ ಸಾಲಗಳ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಒಪ್ಪಂದ ನಡೆದಿದೆ.

2022-23ನೇ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 6.9 ಕ್ಕೆ ಹೆಚ್ಚಿಸಿದ ವಿಶ್ವಬ್ಯಾಂಕ್
ಪ್ರಸಕ್ತ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ವಿಶ್ವಬ್ಯಾಂಕ್ ಶೇ 6.9 ಕ್ಕೆ ಮಂಗಳವಾರ ಹೆಚ್ಚಿಸಿದೆ. ಈ ಮೊದಲು ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿತ್ತು.

ಸಂಬಳ ನೀಡಲಾಗದೆ ವಿಶ್ವಬ್ಯಾಂಕ್ ನೌಕರರಿಗೆ ಗೇಟ್ ಪಾಸ್: ತಾಲಿಬಾನ್ ಸರ್ಕಾರಕ್ಕೆ ಮುಖಭಂಗ
ಅಲ್ಲಿನ ವಿಶ್ವಬ್ಯಾಂಕ್ ಕಚೇರಿಯಲ್ಲಿ ಕೆಲಸದಿಂದ ತೆಗೆದುಹಾಕಲ್ಪಟ್ಟ ನೌಕರರು 15,000 ರೂ.ಗಳಿಗೆ ಕೆಲಸಕ್ಕಿದ್ದರು ಎಂದು ತಿಳಿದುಬಂದಿದೆ.

ದೇಶಗಳ ಆರ್ಥಿಕ ಪ್ರಗತಿ ರ್ಯಾಂಕಿಂಗ್, ಪೇಚಿಗೆ ಸಿಲುಕಿದ ವಿಶ್ವ ಬ್ಯಾಂಕ್...! ಚೀನಾ ಓಲೈಕೆಗೆ ಮುಂದಾಗಿ 'ಮಹಾ ಎಡವಟ್ಟು'..!
ಚೀನಾ ಮತ್ತು ಇತರ ಸರ್ಕಾರಗಳ ಒತ್ತಡಕ್ಕೆ ಮಣಿದ ಆರೋಪಕ್ಕೆ ಗುರಿಯಾಗಿರುವ ವಿಶ್ವಬ್ಯಾಂಕ್ ತನ್ನ ಜನಪ್ರಿಯ ಆರ್ಥಿಕ ದೇಶಗಳ ಶ್ರೇಯಾಂಕ ವರದಿಯನ್ನು ಕೈಬಿಟ್ಟಿದೆ.

2021ರಲ್ಲಿ ಭಾರತದ ಆರ್ಥಿಕತೆ ಶೇಕಡಾ 8.3ಕ್ಕೆ ಏರಿಕೆ ಸಾಧ್ಯತೆ: ವಿಶ್ವಬ್ಯಾಂಕ್
ಭಾರತದ ಆರ್ಥಿಕತೆಯು 2021ರಲ್ಲಿ ಶೇ. .8.3 ಮತ್ತು 2022ರಲ್ಲಿ ಶೇ. 7.5ರಷ್ಟಾಗುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

