ವಾರದ ಆರಂಭದಲ್ಲೇ ಏರಿಕೆ ಕಂಡ ಷೇರುಮಾರುಕಟ್ಟೆ, ರೂಪಾಯಿ ಮೌಲ್ಯದಲ್ಲೂ ಚೇತರಿಕೆ
ಕಳೆದ ವಾರಾಂತ್ಯದಲ್ಲಿ ಕುಸಿತಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ಭಾರತೀಯ ಷೇರುಮಾರುಕಟ್ಟೆ ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏರುಗತಿಯಲ್ಲಿ ಸಾಗಿದೆ.

Published On :
ಮುಂಬೈ: ಕಳೆದ ವಾರಾಂತ್ಯದಲ್ಲಿ ಕುಸಿತಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ಭಾರತೀಯ ಷೇರುಮಾರುಕಟ್ಟೆ ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏರುಗತಿಯಲ್ಲಿ ಸಾಗಿದೆ.
ಕಳೆದ ವಾರ ದಾಖಲೆ ಅಂಶಗಳ ಏರಿಕೆ ಕಂಡು ವಾರಾಂತ್ಯದಲ್ಲಿ ಕುಸಿತಗೊಂಡಿದ್ದ ಸೆನ್ಸೆಕ್ಸ್ ಇಂದು ವಾರದ ವಹಿವಾಟಿನ ಆರಂಭದಲ್ಲೇ 289 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ 38,798.10 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 71.30 ಅಂಕಗಳ ಏರಿಕೆ ಕಾಣುವ ಮೂಲಕ 10, 700 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ಇಂದಿನ ವಹಿವಾಟಿಗೆ ಈ ಹಿಂದೆ ಬಿಡುಗಡೆಯಾಗಿದ್ದ ಸಕಾರಾತ್ಮಕ ಜಿಡಿಪಿ ವರದಿ ಮತ್ತು ಮತ್ತು ಏಪ್ರಿಲ್ ಜೂನ್ ತಿಂಗಳ ತ್ರೈಮಾಸಿಕ ವರದಿ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ವಹಿವಾಟಿನಿಂದಾಗಿ ಕೃಷಿ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದ್ದು, ರುಪಾಯಿ ಮೌಲ್ಯ ಕೂಡ ಅಲ್ಪ ಚೇತರಿಕೆ ಕಂಡಿದೆ. ಕಳೆದ ವಾರ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರಮಾಣದ ಕುಸಿತ ಕಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


