ಎಸ್ ಬಿಐಗೇ ದೋಖಾ: ಏಪ್ರಿಲ್-ಸೆಪ್ಟೆಂಬರ್ ನಲ್ಲಿ 5,555 ಕೋಟಿ ರೂ. ಮೌಲ್ಯದ 1,329 ವಂಚನೆ ಪ್ರಕರಣ!
5,555.48 ಕೋಟಿ ರೂ.ಮೊತ್ತದ ಬರೋಬ್ಬರಿ 1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್......

Published On :
ಇಂದೋರ್: 5,555.48 ಕೋಟಿ ರೂ.ಮೊತ್ತದ ಬರೋಬ್ಬರಿ 1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೇಳಿದೆ. ಆರ್ಟಿಐ ಮೂಲಕ ಕೇಳಳಾದ ಪ್ರಶ್ನೆಗೆ ಬ್ಯಾಂಕ್ ಈ ಉತ್ತರ ನೀಡಿದೆ.
ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಎಸ್ಬಿಐ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 723.06 ಕೋಟಿ ರೂ. ಮೊತ್ತದ 669 ಪ್ರಕರಣಗಳು ವರದಿಯಾಗಿದ್ದರೆ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ 4,832.42 ಕೋಟಿ ರೂ. ಮೌಲ್ಯದ 660 ಪ್ರಕರಣಗಳು ವರದಿಯಾಗಿದೆ ಎಂದು ವಿವರಿಸಿದೆ.
ಈ ಅಂಕಿಅಂಶಗಳ ಪ್ರಕಾರ ಮೊದಲ ಹಾಗೂ ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚಿನ ವ್ಯತ್ಯಾಸವೇನೂ ಆಗಿಲ್ಲದಿರುವುದು ಕಂಡಿದೆ. ಎರಡೂ ಅವಧಿಯಲ್ಲಿ ಹೋಲಿಸಿದಾಗ ದ್ವಿತೀಯ ಅವಧಿಯಲ್ಲಿ ಮೊದಲಿಗಿಂತ ಕೇವಲ 9 ಪ್ರಕರಣಗಳಷ್ತೇ ಕಡಿಮೆಯಾಗಿದ್ದು ಕಾನೀಸುತ್ತದೆ.ಆದರೆ ಎರಡೂ ತ್ರೈಮಾಸಿಕಗಳಿಂದ ಒಟ್ಟಾರೆ 568.33 ಕೋಟಿ ರು. ವಂಚನೆ ನಡೆದಿದೆ.
ಬ್ಯಾಂಕಿಂಗ್ ವಂಚನೆಯ ಕಾರಣ ಬ್ಯಾಂಕ್ ಗೆ ಆದ ಹಣಕಾಸಿನ ನಷ್ಟವೆಷ್ಟು ಎಂದೂ ಗೌಡ ಪ್ರಶ್ನಿಸಿದ್ದು ಇದರ ಕುರಿತು ಪ್ರತಿಕ್ರಿಯೆ ನೀಡಿದ ಬ್ಯಾಂಕ್ "ತಾನಿನ್ನೂ ಆ ಮೊತ್ತವನ್ನು ಎಣಿಕೆ ಮಾಡಿಲ್ಲ" ಎಂದಿದೆ.
ನಿರ್ದಿಷ್ಟ ಅವಧಿಯಲ್ಲಿ ಬ್ಯಾಂಕಿಂಗ್ ವಂಚನೆಗಳ ಕಾರಣದಿಂದ ಬ್ಯಾಂಕಿನ ಗ್ರಾಹಕರು ಕಳೆದುಕೊಂಡ ಹಣದ ಬಗ್ಗೆ ಕೇ:ಳಲಾಗಿರುವ ಪ್ರಶ್ನೆಗೆ "ಎಸ್ಬಿಐ ಗ್ರಾಹಕರಿಗಾದ ಮೋಸ, ಅವರು ಕಳೆದುಕೊಂಡ ಹಣದ ಲೆಕ್ಕವನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ. ಆರ್ಟಿಐ ಕಾಯಿದೆ, 2005 ರ ಸೆಕ್ಷನ್ 7 (9) ಅಡಿಯಲ್ಲಿ ಇದು ಬರುವುದಿಲ್ಲ" ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


