ಬ್ಯಾಂಕ್ ವಂಚನೆ

2000 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಅವರ ನಿವಾಸ ಮತ್ತು ಆರ್‌ಸಿಒಎಂಗೆ ಸಂಬಂಧಿಸಿದ ಆವರಣದಲ್ಲಿ ಏಜೆನ್ಸಿ ಶೋಧ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಹಕಾರಿ ಬ್ಯಾಂಕ್ 'ವಂಚನೆ' ಪ್ರಕರಣ: ಇದೇ ಮೊದಲ ಬಾರಿಗೆ ಅಂಡಮಾನ್ & ನಿಕೋಬಾರ್ ನಲ್ಲಿ ಇಡಿ ದಾಳಿ!
ಮೂಲಗಳ ಪ್ರಕಾರ, ಮಾಜಿ ಕಾಂಗ್ರೆಸ್ ಸಂಸದ ಶರ್ಮಾ ಅವರ ಪಾತ್ರದ ಬಗ್ಗೆಯೂ ED ತನಿಖೆ ನಡೆಸಿದೆ.

ನಕಲಿ ಇ-ಬ್ಯಾಂಕ್ ಗ್ಯಾರಂಟಿಗಳಿಂದ ಬ್ಯಾಂಕ್'ಗಳಿಗೆ 168 ಕೋಟಿ ರೂ. ವಂಚನೆ: ಲೆಕ್ಕಪರಿಶೋಧಕ ಬಂಧನ
ಬ್ಯಾಂಕ್ ಸಾಲಗಳಿಗೆ ನೀಡಲಾಗುವ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಬರೋಬ್ಬರಿ 168 ಕೋಟಿ ರೂ. ವಂಚಿಸಿ, ವಿದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಸಾಲ ಪಡೆದು 439.7 ಕೋಟಿ ರೂ. ವಂಚನೆ: ತನಿಖೆಗೆ ಸಹಕರಿಸುವಂತೆ ಶಾಸಕ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ಸೂಚನೆ
ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಪಡೆದ ಸಾಲ ಮರುಪಾವತಿಸದ ಪ್ರಕರಣ ಸಂಬಂಧ ಸಿಐಡಿ ವಿಚಾರಣೆಗೆ ಸಹಕರಿಸುವಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೂಚಿಸಿರುವ ಹೈಕೋರ್ಟ್, ಬಂಧನದಂತಹ ಕ್ರಮಕ್ಕೆ ಮುಂದಾಗುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಶುಕ್ರವಾರ ಆದೇಶಿಸಿದೆ.

ವಂಚನೆ ಪ್ರಕರಣ: ಮುಂದಿನ ವಿಚಾರಣೆವರೆಗೂ ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಕ್ರಮ ಬೇಡ: ಸರ್ಕಾರಕ್ಕೆ ಹೈಕೋರ್ಟ್
ಮುಂದಿನ ವಿಚಾರಣೆವರೆಗೂ ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಕ್ರಮ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ಅತಿದೊಡ್ಡ ಬ್ಯಾಂಕ್ ವಂಚನೆ ಕೇಸ್: ಇಬ್ಬರು ಬಿಲ್ಡರ್‌ಗಳ 415 ಕೋಟಿ ರೂ. ಮೌಲ್ಯದ ಆಸ್ತಿ ವಶ
ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಉದ್ಯಮಿಗಳಾದ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸಲೆ ಅವರಿಗೆ ಸೇರಿದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ
2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ. ಗಳಾಗಿತ್ತು.

ನಕಲಿ ಚೆಕ್ ಬಳಸಿ ಅಯೋಧ್ಯೆ ರಾಮಮಂದಿರ ಟ್ರಸ್ಟ್ ಖಾತೆಯಿಂದ 6 ಲಕ್ಷ ರೂ ಎಗರಿಸಿದ ಕಳ್ಳರು!
ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಲು ಉದ್ದೇಶಿಸಿರುವ ಶ್ರೀ ರಾಮ್ ಜನಮಭೂಮಿ ತೀರ್ಥ ಕ್ಷೇತ್ರದ ಉಳಿತಾಯ ಖಾತೆಗಳಿಂದ 6 ಲಕ್ಷ ರೂ.ಗಳನ್ನು ವಂಚಕರು ಬುಧವಾರ ಕಳವು ಮಡಿದ್ದಾರೆ. ಆದರೆ ಈ ವ್ಯವಹಾರದ ಬಗ್ಗೆ ಟ್ರಸ್ಟಿಗಳಿಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ.

ಪ್ರಸಕ್ತ ಹಣಕಾಸು ವರ್ಷದಲ್ಲಿ 1.85 ಲಕ್ಷ ಕೋಟಿ ರೂ. ಬ್ಯಾಂಕ್ ವಂಚನೆ:ಆರ್ ಬಿಐ
ಕೋವಿಡ್-19ನಿಂದಾಗಿ ಆರ್ಥಿಕತೆ ಕುಸಿತ ಕಂಡು ಬರುತ್ತಿರುವುದರ ಮಧ್ಯೆಯೇ ಬ್ಯಾಂಕ್ ವಂಚನೆ ಪ್ರಕರಣ ಕೂಡ ಹೆಚ್ಚಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆತಂಕ ಉಂಟುಮಾಡುವ ವರದಿ ನೀಡಿದೆ.

