ಕೆಲಸ ಬಿಡುವುದನ್ನು ತಡೆಯಲು ದಕ್ಷ ನೌಕರರ ಸಂಬಳ ಡಬಲ್ ಮಾಡಿದ ಇನ್ಫೋಸಿಸ್
ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ತನ್ನ 'ಬ್ರಿಡ್ಜ್ ಪ್ರೊಗ್ರಾಮ್' ಅನ್ನು ಯಶಸ್ವಿಯಾಗಿ...

Published On :
ಬೆಂಗಳೂರು: ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ತನ್ನ 'ಬ್ರಿಡ್ಜ್ ಪ್ರೊಗ್ರಾಮ್' ಅನ್ನು ಯಶಸ್ವಿಯಾಗಿ ಪೂರೈಸಿದ ದಕ್ಷ ನೌಕರರ ಸಂಬಳವನ್ನು ಡಬಲ್ ಮಾಡುತ್ತಿದೆ. ಈ ಮೂಲಕ ಹೆಚ್ಚಿನ ಸಂಬಳಕ್ಕಾಗಿ ಕಂಪನಿ ತೊರೆಯುತ್ತಿರುವ ಸಮರ್ಥ ನೌಕರರಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಇತ್ತೀಚಿನ ದಿನಗಳ ಜೂನಿಯರ್ ಮಟ್ಟದ ಉದ್ಯೋಗಿಗಳು ಶೇ.20ರಷ್ಟು ವೇತನ ಹೆಚ್ಚಳಕ್ಕಾಗಿ ಕಂಪನಿ ತೊರೆಯುತ್ತಿದ್ದು, ಇದನ್ನು ತಡೆಯಲು ಕಂಪನಿಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ದಕ್ಷ ನೌಕರರಿಗಾಗಿ ಈ ವರ್ಷ 'ಬ್ರಿಡ್ಜ್ ಟು ಕನ್ಸಲ್ಟ್' ಪ್ರೊಗ್ರಾಮ್ ಆರಂಭಿಸಿದ್ದು, ಇದನ್ನು ಯಶಸ್ವಿಯಾಗಿ ಪೂರೈಸಿದ ನೌಕರರ ವೇತನವನ್ನು ಬಡಲ್ ಮಾಡಲು ನಿರ್ಧರಿಸಲಾಗಿದೆ.
ಈ ಪ್ರೊಗ್ರಾಮ್ ನಡಿ ಇದುವರೆಗೆ ಸುಮಾರು 400 ಯುವ ನೌಕರರಿಗೆ ತರಬೇತಿ ನೀಡಲಾಗಿದ್ದು, ಅವರ ಸಂಬಳವನ್ನು ಶೇ.80ರಿಂದ ಶೇ.120ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇನ್ಫೋಸಿಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಕ್ರಿಶ್ ಶಂಕರ್ ಅವರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಟಿಸಿಎಸ್ ಮತ್ತು ವಿಪ್ರೊ ಸೇರಿದಂತೆ ದೇಶದ ಹಲವು ಐಟಿ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸುತ್ತಿದ್ದು, ಕನ್ಸಲ್ಟಿಂಗ್, ಆಟೋಮೇಷನ್ ವಿಭಾಗದ ನೌಕರರಿಗೆ ಕೌಶಲ್ಯ ತರಬೇತಿ ನೀಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


