ರಫ್ತು ಮಾರಾಟ ಹೆಚ್ಚಳಕ್ಕೆ ಸಕ್ಕರೆ ಮೇಲಿನ ರಫ್ತು ತೆರಿಗೆ ರದ್ದು: ಕೇಂದ್ರ ಸರ್ಕಾರ
ಈ ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳಗೊಂಡಿದ್ದು, ಸಾಗರೋತ್ತರ ರಾಷ್ಟ್ರಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಕ್ಕರೆ ಮೇಲಿನ ರಪ್ತು ತೆರಿಗೆಯಲ್ಲಿ ಶೇ.20ರಷ್ಟನ್ನು ಭಾರತ ಕಡಿತಗೊಳಿಸಿದೆ.

ನವದೆಹಲಿ: 2017-18ರ ವರ್ಷದಲ್ಲಿ ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳಗೊಂಡಿದ್ದು, ಸಾಗರೋತ್ತರ ರಾಷ್ಟ್ರಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಕ್ಕರೆ ಮೇಲಿನ ರಪ್ತು ತೆರಿಗೆಯಲ್ಲಿ ಶೇ.20ರಷ್ಟನ್ನು ಭಾರತ ಕಡಿತಗೊಳಿಸಿದೆ.
ಭಾರತದಲ್ಲಿ ವಿಶ್ವದಲ್ಲಿಯೇ ಹೆಚ್ಚಿನ ಸಕ್ಕರೆ ಬಳಕೆದಾರರು ಇದ್ದಾರೆ. ಮನೆಯ ಬಳಕೆಗೆ ಆಗುವಷ್ಟು ದಾಸ್ತಾನು ಮಾಡಿಕೊಂಡು ಪ್ರತಿ ಮಿಲ್ ನಿಂದ 2-3 ಮಿಲಿಯನ್ ಟನ್ ರಪ್ತು ಮಾಡುವಂತೆ ಕಡ್ಡಾಯ ಮಾಡಲಾಗಿದೆ ಎಂದು ಕಳೆದ ವಾರ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಸೆಪ್ಟೆಂಬರ್ ತಿಂಗಳಿಗೆ ಕೊನೆಯಾಗುವ 2017-18ರ ಆವೃತ್ತಿಯಲ್ಲಿ ಭಾರತ 29.5 ಮಿಲಿಯನ್ ಟನ್ ನಷ್ಟು ಸಕ್ಕರೆ ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಪ್ರಸಕ್ತ ವರ್ಷದಲ್ಲಿ ಶೇ.45 ರಷ್ಟು ಸಕ್ಕರೆ ಉತ್ಪಾದನೆ ಹೆಚ್ಚಳವಾಗುವ ಲಕ್ಷಣ ಗೋಚರಿಸುತ್ತಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ ಶೇ.15 ರಷ್ಟು ಸ್ಥಳೀಯ ಬೆಲೆಯಲ್ಲಿ ಕುಸಿತಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


