ವಾಣಿಜ್ಯ

ಭಾರತದಲ್ಲಿ ಶೇ.5 ರಷ್ಟು ವಯಸ್ಕರರು ಮಾತ್ರ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆ

ಭಾರತದ ಶೇ.5 ರಷ್ಟು ವಯಸ್ಕರು ಮಾತ್ರ ಉದ್ಯಮಗಳನ್ನು ಸ್ಥಾಪಿಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಭಾರತದಲ್ಲಿ ಶೇ.5 ರಷ್ಟು ವಯಸ್ಕರರು ಮಾತ್ರ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆ
ಭಾರತದಲ್ಲಿ ಶೇ.5 ರಷ್ಟು ವಯಸ್ಕರರು ಮಾತ್ರ ಉದ್ಯಮ ಸ್ಥಾಪಿಸುತ್ತಾರೆ: ಸಮೀಕ್ಷೆ
Published On :
ಭಾರತದ ಶೇ.5 ರಷ್ಟು ವಯಸ್ಕರು ಮಾತ್ರ ಉದ್ಯಮಗಳನ್ನು ಸ್ಥಾಪಿಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. 
ಜಾಗತಿಕ ವಾಣಿಜ್ಯೋದ್ಯಮ ಮಾನಿಟರ್ (ಜಿಇಎಂ) ಇಂಡಿಯಾದ 2016-17 ರ ವರದಿಯ ಪ್ರಕಾರ ಶೇ.11 ರಷ್ಟು ವಯಸ್ಕರು ಆರಂಭಿಕ ಹಂತದ ವಾಣಿಜ್ಯೋದ್ಯಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ, ಆದರೆ ಶೇ.5 ರಷ್ಟು ಮಂದಿ ಮಾತ್ರ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸುತ್ತಾರೆ. 
ಉದ್ಯಮ ಸ್ಥಾಪಿಸಲು ಯತ್ನಿಸಿ ಅದರಿಂದ ದೂರ ಸರಿಯುವವರ ಸಂಖ್ಯೆ ಭಾರತದಲ್ಲಿ ಶೇ.26.4 ರಷ್ಟಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ತಿಳಿದುಬಂದಿದೆ. 18-64 ವರ್ಷದವರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟಾರೆ  ಆರಂಭಿಕ ಹಂತದ ವಾಣಿಜ್ಯೋದ್ಯಮ ಚಟುವಟಿಕೆಗಳಲ್ಲಿ (ಟಿಇಎ) ಶೇ.11 ರಷ್ಟು ಮಂದಿ ಗುರುತಿಸಿಕೊಂಡಿದ್ದಾರೆ. 
ಶೇ.4-5 ರಷ್ಟು ಮಂದಿ ಮಾತ್ರ ಹೊಸದಾಗಿ ಉದ್ಯಮವನ್ನು ಮುನ್ನಡೆಸುತ್ತಿರುವವರಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.