ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮತ್ತೊಂದು ಹಣ ವಂಚನೆ ಕೇಸು ಪತ್ತೆ
ಉದ್ಯಮಿ ನೀರವ್ ಮೋದಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿ ಸುದ್ದಿಯಾಗಿದ್ದ ಪಂಜಾಬ್ ...

ನವದೆಹಲಿ: ಉದ್ಯಮಿ ನೀರವ್ ಮೋದಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿ ಸುದ್ದಿಯಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯಲ್ಲಿ ಮತ್ತೊಂದು 9.9 ಕೋಟಿ ರೂಪಾಯಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದೆ.
ಹಲವು ಬ್ಯಾಂಕುಗಳಿಂದ ಸಾಗರೋತ್ತರ ಹಣ ಪಡೆದುಕೊಳ್ಳಲು ಹಲವು ಎಲ್ಒಯು ಮೂಲಕ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 1.77 ಶತಕೋಟಿ ಅಮೆರಿಕ ಡಾಲರ್ ವಂಚನೆ ಎಸಗಿರುವುದು ಪತ್ತೆಯಾದ ನಂತರದ ಬೆಳವಣಿಗೆ ಇದಾಗಿದೆ.
ನೀರವ್ ಮೋದಿ ಕೇಸಿಗೆ ಸಂಬಂಧಪಟ್ಟಂತೆ ಪಂಜಾಬ್ ನ್ಯಾಷನಲ್ ಬ್ಯಾಂಕು ನೀರವ್ ಮೋದಿ ಹಾಗೂ ಅವರ ಸಂಬಂಧಿಕ ಮೆಹುಲ್ ಚೊಕ್ಸಿ ವಿರುದ್ಧ ಈಗಾಗಲೇ ಕೇಸು ದಾಖಲಿಸಿ ವಿಚಾರಣೆ ನಡೆಯುತ್ತಿದೆ.
ಕಳೆದ ಗುರುವಾರ ಸಿಬಿಐ ನೀರವ್ ಮೋದಿಗೆ ಸೇರಿದ ಎರಡು ಸಂಸ್ಥೆಗಳ ವಿರುದ್ಧ ಹೊಸ ಕೇಸನ್ನು ದಾಖಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


