ವಾಣಿಜ್ಯ

2019 ರಲ್ಲಿ ಭಾರತ ಶೇ.7.3 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲಿದೆ: ವಿಶ್ವ ಬ್ಯಾಂಕ್

ಮುಂದಿನ ಆರ್ಥಿಕ ವರ್ಷದಲ್ಲಿ ಭಾರತ ದ ಜಿಡಿಪಿ ಬೆಳವಣಿಒಗೆ ದರ ಶೇ. 7.3 ಆಗಿರಲಿದೆ ಮತ್ತೆ 2019-20ರಲ್ಲಿ ಈ ದರವು 7.5 ಪ್ರತಿಶತದಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

2019 ರಲ್ಲಿ ಭಾರತ ಶೇ.7.3 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲಿದೆ: ವಿಶ್ವ ಬ್ಯಾಂಕ್
ವಿಶ್ವ ಬ್ಯಾಂಕ್
Published On :
ನವದೆಹಲಿ: ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಒಗೆ ದರ ಶೇ. 7.3  ಆಗಿರಲಿದೆ  ಮತ್ತೆ  2019-20ರಲ್ಲಿ ಈ ದರವು 7.5 ಪ್ರತಿಶತದಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.
ವಿಶ್ವ ಬ್ಯಾಂಕ್ ನ ದ್ವೈವಾರ್ಷಿಕ ಪ್ರಕಟಣೆಯಲ್ಲಿ ಈ ಮಾಹಿತಿ ನಿಡಲಾಗಿದೆ. ಭಾರತ ಅಭಿವೃದ್ಧಿ  ನವೀಕರಣ (ಐಡಿಯು), ಭಾರತದ ಬೆಳವಣಿಗೆಯ ಮಾದರಿ ಹೇಳುವಂತೆ ಮಾ.31ಕ್ಕೆ ಅಂತ್ಯವಾಗುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು 6.7 ಪ್ರತಿಶತದಷ್ಟು ಬೆಳವಣಿಗೆ ದರವನ್ನು ದಾಖಲಿಸಲಿದೆ.
ಕ್ರೆಡಿಟ್ ಹಾಗೂ ಹೂಡಿಕೆ ಸಂಬಂಧದ ಸಮಸ್ಯೆ ಪರಿಹಾರ, ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನಿರಿಸಿಕೊಂಡು ದೇಶವು 8 ಪ್ರತಿಶತದಷ್ಟು ಬೆಳವಣಿಗೆಸಾಧಿಸುವುದು ಅಗತ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
"ಬಾರತದ ಆರ್ಥಿಕತೆಯು ಅನಾಣ್ಯೀಕರಣ ಹಾಗೂ ಜಿಎಸ್ಟಿಯಿಂದ ಚೇತರಿಸಿಕೊಳ್ಳುವುದು ಸಾಧ್ಯವಿದೆ. ವರ್ಷಕ್ಕೆ ಸುಮಾರು  7.5 ಪ್ರತಿಶತದವರೆಗೆ ಬೆಳವಣಿಗೆ ಸಾಧಿಸುವ ಮೂಲಕ ಸ್ಥಿರವಾದ ಮಟ್ಟಕ್ಕೆ ನಿಧಾನವಾಗಿ ಹಿಂತಿರುಗಬೇಕಿದೆ." ವರದಿಯಲ್ಲಿ ಹೇಳಲಾಗಿದೆ.
2016 ರ ನವೆಂಬರ್ ನಲ್ಲಿ ಕಪ್ಪು ಹಣವನ್ನು ತಡೆಯುವ ನಿಟ್ಟಿನಲ್ಲಿ ಭಾರೀ ಮೌಲ್ಯದ ನೋಟುಗಳಾದ 500  ಹಾಗೂ 1,000  ಮುಖಬೆಲೆಯ ನೋಟುಗಳನ್ನು ಸರ್ಕಾರ ನಿಷೇಧಿಸಿತ್ತು.  ಇದಾದ ನಂತರದಲ್ಲಿ ದೇಶದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆ ಆಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ನು ಜಾರಿಗೆ ತಂದಿತು. ಈ ಎರಡೂ ಕ್ರಮಗಳು ದೇಶದ ಆರ್ಥಿಕ ಚಟುವಟಿಕೆ ಮೇಲೆ ಅತ್ಯಂತ ಕಡಿಮೆ ಅವಧಿಯಲ್ಲಿ ಗಾಢ ಪರಿನಾಮ ಬೀರಿದ್ದವು.
ಪ್ರಸಕ್ತ ಆರ್ಥಿಕ ವರ್ಷದ  ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.5.7 ರ ಮಟ್ಟಕ್ಕೆ ಕುಸಿದಿದೆ. ಆದರೆ ಇದೀಗ ತುಸು ಚೇತರಿಕೆಯಾಗಿದ್ದು ಆರ್ಥಿಕ ವರ್ಷ ಅಂತ್ಯವಾಗುವ ವೇಳೆಗೆ ಬೆಳವಣಿಗೆ ದರ ಶೇ.  6.6ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಆಲಾಗಿದೆ. 2018-19 ಆರ್ಥಿಕ ವರ್ಷದಲ್ಲಿ ದೇಶವು ಶೇ. 7 ರಿಂದ 7.5 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.