ಒಂದೇ ದಿನ 611 ಅಂಕ ಏರಿಕೆ ಕಂಡ ಸೆನ್ಸೆಕ್ಸ್, ಜುಲೈ ತಿಂಗಳ ಬಳಿಕ ಗರಿಷ್ಠ ಸಾಧನೆ
ಸೋಮವಾರ ಒಂದೇ ದಿನ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡಿದ್ದು, ಇದು ಕಳೆದ ಜುಲೈ ತಿಂಗಳ ಬಳಿಕ ಭಾರತೀಯ ಷೇರುಮಾರುಕಟ್ಟೆ ಗಳಿಸಿದ ಒಂದು ದಿನದ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ.

Published On :
ಮುಂಬೈ: ಸೋಮವಾರ ಒಂದೇ ದಿನ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡಿದ್ದು, ಇದು ಕಳೆದ ಜುಲೈ ತಿಂಗಳ ಬಳಿಕ ಭಾರತೀಯ ಷೇರುಮಾರುಕಟ್ಟೆ ಗಳಿಸಿದ ಒಂದು ದಿನದ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಆರ್ಥಿಕತೆಯಲ್ಲಿ ಕಂಡುಬಂದಿರುವ ಚೇತರಿಕೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹ ಉಂಟುಮಾಡಿದ್ದು ಪರಿಣಾಮ ಭಾರತೀಯ ಶೇರುಪೇಟೆಯ ಮೇಲೂ ಬಿದ್ದಿದೆ. ಸೋಮವಾರಂದು ಬಿಎಸ್‌ಇ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡು 33,917.94ಕ್ಕೆ ತಲುಪಿದೆ. ಈ ಮಟ್ಟದ ಏರಿಕೆ ಮಾರ್ಚ್ 2016ರ ನಂತರ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ಗರಿಷ್ಠ ಸಾಧನೆ ಮಾಡಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಮುಖವಾಗಿ ವಿದೇಶಿ ಬಂಡವಾಳ ಭಾರತೀಯ ಮಾರುಕಟ್ಟೆಗೆ ಧಾರಾಳವಾಗಿ ಬರುತ್ತಿರುವುದು ಮತ್ತು ಹಣದುಬ್ಬರ ಮತ್ತು ಕೈಗಾರಿಕಾ ಅಂಕಿಅಂಶಗಳು ಉತ್ತಮವಾಗಿರುವುದು ಷೇರುಪೇಟೆಯ ಚೇತೋಹಾರಿ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಅಂತೆಯೇ ನಿಫ್ಟಿ ಕೂಡಾ 194.55 ಅಂಕ ಏರಿಕೆ ಕಂಡು 10,421.40 ಅಂಕಗಳಿಗೆ ಏರಿಕೆಯಾಗಿದೆ.
ದಿನದ ವಹಿವಾಟಿನಲ್ಲಿ ನಿಫ್ಟಿ 10,433.65 ಅಂಕ ತಲುಪಿತ್ತು. ಹೂಡಿಕೆದಾರರು ಖರೀದಿಗೆ ಮುಂದಾದ ಕಾರಣ ಈ ರೀತಿಯ ಏರಿಕೆ ಕಂಡುಬಂದಿದೆ. ಅಮೆರಿಕದ ಉದ್ಯೋಗ ವರದಿಯು ಗುಣಾತ್ಮಕವಾಗಿರುವುದು ಕೂಡಾ ಈ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈSensexNiftyಸೆನ್ಸೆಕ್ಸ್ನಿಫ್ಟಿIndian Stock Exchangeಭಾರತೀಯ ಷೇರುಮಾರುಕಟ್ಟೆUS Dalal Streetಅಮೆರಿಕ ಷೇರುಪೇಟೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


