ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ 'ಮಹಾರಾಜ ದರ್ಜೆ' ಸೀಟುಗಳು, ವಿವಿಧ ಭಕ್ಷ್ಯಗಳು
ಏರ್ ಇಂಡಿಯಾ ವಿಮಾನದ ವಿದೇಶಿ ವಿಮಾನಗಳಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಹೊಸ ....

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವಿದೇಶಗಳಿಗೆ ಪ್ರಯಾಣಿಸುವವರು ಇನ್ನು ಮುಂದೆ ಹೊಸ ಅನುಭವವನ್ನು ಪಡೆಯಬಹುದು.
ಏರ್ ಇಂಡಿಯಾ ಸದ್ಯದಲ್ಲಿಯೇ ಮಹಾರಾಜ ಬ್ಯುಸಿನೆಸ್ ದರ್ಜೆಯ ಸೀಟುಗಳು, ವಿಮಾನದಲ್ಲಿ ಹಲವು ಹೊಸ ಭಕ್ಷ್ಯಗಳು ಮತ್ತು ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನು ಜಾರಿಗೆ ತರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ವಿಮಾನದಲ್ಲಿನ ವಿನ್ಯಾಸ ಮತ್ತು ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಿದೆ.
ಹೊಸ ಸೇವೆ ನಾಳೆ ಜಾರಿಗೆ ಬರಲಿದೆ. ನಷ್ಟದಲ್ಲಿರುವ ಏರ್ ಇಂಡಿಯಾದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಸರ್ಕಾರ ಯೋಜಿಸುತ್ತಿರುವ ಸಂದರ್ಭದಲ್ಲಿ ಈ ಹೊಸ ಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ಗಮನ ಸೆಳೆದಿದೆ.
ಮಹಾರಾಜ ದರ್ಜೆಯ ಸೀಟುಗಳನ್ನು ಏರ್ ಇಂಡಿಯಾದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.
ಬೋಯಿಂಗ್ 777 ಮತ್ತು 787 ವಿಮಾನಗಳಲ್ಲಿ ಈಗಿರುವ ಬ್ಯುಸಿನೆಸ್ ದರ್ಜೆಯ ಸೀಟುಗಳನ್ನು ಪರಿಷ್ಕರಿಸಿ ಮಹಾರಾಜ ಬ್ಯುಸಿನೆಸ್ ದರ್ಜೆಯ ಸೀಟುಗಳನ್ನಾಗಿ ಬದಲಾಯಿಸಲಾಗುವುದು. ಸಣ್ಣ ಮತ್ತು ದೀರ್ಘಾವಧಿಯ ಅಂತಾರಾಷ್ಟ್ರೀಯ ವಾಯುಮಾರ್ಗಗಳಲ್ಲಿ ಈ ವಿಮಾನಗಳು ಹಾರಾಟ ನಡೆಸಲಿವೆ.
ಪ್ರಸ್ತುತ ಏರ್ ಇಂಡಿಯಾ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಶೇಕಡಾ 17ರಷ್ಟು ಮಾರುಕಟ್ಟೆ ಷೇರುಗಳನ್ನು ಒಳಗೊಂಡಿದೆ. ಪ್ರತಿ ವಾರಕ್ಕೆ 2,500 ಅಂತಾರಾಷ್ಟ್ರೀಯ ಸ್ಲಾಟ್ ಗಳನ್ನು ಹೊಂದಿದ್ದು 43 ವಿದೇಶಿ ಸ್ಥಳಗಳಿಗೆ ಸಂಚರಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


