ವಾಣಿಜ್ಯ

ಕೇಂದ್ರ ಇನ್ಮುಂದೆ ಸಾಧನೆಗಳ ಜೊತೆ ವೈಫಲ್ಯಗಳನ್ನೂ ಒಪ್ಪಿಕೊಳ್ಳಬೇಕು: ನೀತಿ ಆಯೋಗ ಉಪಾಧ್ಯಕ್ಷ

ಆಡಳಿತ ವೈಫಲ್ಯ" "ಅಸಮರ್ಪಕ ನೀತಿ ನಿರೂಪಣೆ", "ಕ್ಷೀಣಿಸುತ್ತಿರುವ ಆರ್ಥಿಕತೆ" ಇದೆಲ್ಲದರ ಪರಿಣಾಮದ ಹೊರತಾಗಿ ಕೇಂದ್ರ ಸರ್ಕಾರದ ಹಿರಿಯ ನಾಯಕರು ಕಾಂಗ್ರೆಸ್ ಮೇಲೆ ಮುಗಿ ಬಿದ್ದಿದ್ದಾರೆ.

ಕೇಂದ್ರ ಇನ್ಮುಂದೆ ಸಾಧನೆಗಳ ಜೊತೆ ವೈಫಲ್ಯಗಳನ್ನೂ ಒಪ್ಪಿಕೊಳ್ಳಬೇಕು: ನೀತಿ ಆಯೋಗ ಉಪಾಧ್ಯಕ್ಷ
ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್
Published On :
ನವದೆಹಲಿ: "ಆಡಳಿತ ವೈಫಲ್ಯ" "ಅಸಮರ್ಪಕ ನೀತಿ ನಿರೂಪಣೆ", "ಕ್ಷೀಣಿಸುತ್ತಿರುವ ಆರ್ಥಿಕತೆ" ಇದೆಲ್ಲದರ ಪರಿಣಾಮದ ಹೊರತಾಗಿ ಕೇಂದ್ರ ಸರ್ಕಾರದ ಹಿರಿಯ ನಾಯಕರು ಕಾಂಗ್ರೆಸ್ ಮೇಲೆ ಮುಗಿ ಬಿದ್ದಿದ್ದಾರೆ. ಆದರೆ ಇದೀಗ ನೀತಿ ಆಯೋಗದ ಉಪಾಧ್ಯಕ್ಷ ಹೇಳುವಂತೆ  ಕೇಂದ್ರ ಸರ್ಕಾರವು ಕೇವಲ ಅದರ ಸಾಧನೆಗಳಿಗೆ ಮಾತ್ರವಲ್ಲ ಅದರ ವೈಫಲ್ಯಗಳಿಗೂ ಹೊಣೆಗಾರನಾಗುತ್ತದೆ 
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದರು.
ಕಳೆದ ನಾಲ್ಕು ವರ್ಷಗಳ ನರೇಂದ್ರ ಮೋದಿ ಸರ್ಕಾರ ಯುಪಿಎ ಆಡಳಿತದ ಅವಧಿಯಲ್ಲಿದ್ದ ಬಹುತೇಕ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿದೆ. ಮತ್ತು ಇದೀಗ ಸರ್ಕಾರ ತನ್ನ ಸ್ವಂತ ಅರ್ಹತೆಯ ಮೇಲೆ  ತೀರ್ಮಾನಕ್ಕೆ ಬರಲು ಮುಂದಾಗಲಿದೆ ಎಂದು ಅವರು ಹೇಳಿದ್ದಾರೆ.
"ಆರ್ಥಿಕತೆಯು ಅದರ ಪಾರಂಪರಿಕ ಸಮಸ್ಯೆಗಳಿಂದ ಹೊರಬಂದಿದೆ. ಇದನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸಬಾರದು. ಅದೇನು ಆಗಬೇಕಿದೆಯೋ ಅದನ್ನು ಸರ್ಕಾರ ಸಂಪೂರ್ಣವಾಗಿ ಕಾರ್ಯಗತಗೊಳಿಸಲಿದೆ" 
"ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಸರ್ಕಾರ ಏನೆಲ್ಲವನ್ನೂ ಮಾಡಿದ್ದು ಇದಕ್ಕಾಗಿ ಸರ್ಕಾರ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಗಳಾದ ಅಪನಗದೀಕರಣ, ಜಿಎಸ್ಟಿ, ದಿವಾಳಿತನ ಸಂಹಿತೆ ಹಾಗೂ ಬೇನಾಮಿ ಕಾಯ್ದೆ, ರೇರಾ, ಬ್ಯಾಂಕುಗಳ ಸುಧಾರಣೆಗೆ ನಾನಾ ಕ್ರಮ ಕೈಗೊಂಡಿದೆ. ಇದೀಗ ನಾವುಗಳು ಹಳೆಯ ಸಮಸ್ಯೆಗಳಿಂದ ಹೊರತಾಗಿದ್ದು ಸರ್ಕಾರವು  ತನ್ನದೇ ಆದ  ತೀರ್ಮಾನ ತೆಗೆದುಕೊಳ್ಳುವುದಕ್ಕೆ ಶಕ್ತವಾಗಿದೆ" ರಾಜೀವ್ ಹೇಳಿದ್ದಾರೆ.
ಬಿಜೆಪಿ ಸರ್ಕಾರ, ಪ್ರಧಾನಿ ಮೋದಿ, ಅರುಣ್  ಜೇಟ್ಲಿ ಸೇರಿದಂತೆ ಹಲವು ಹಿರಿಯ ಮುಖಂಡರು ಕಾಂಗ್ರೆಸ್ ನ ಯುಪಿಎ ಅಧಿಕಾರಾವಧಿಯಲ್ಲಿ ನಿರೂಪಿತವಾದ ಕೆಲವು ಕ್ರಮಗಳಿಂದ ದೇಶದ ಆರ್ಥಿಕತೆಯನ್ನು ಸುಧಾರಿಸಲು ನಮಗೆ ಸಮಯ ಹಿಡಿಯುತ್ತದೆಂದು ಇತ್ತೀಚಿನವರೆಗೆ ಹೇಳುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ನೀರವ್ ಮೋದಿ ಪಿಎನ್ಬಿ ವಂಚನೆಯಿಂದ ಹಿಡಿದು, ನಿಧಾನಗತಿಯ ಜಿಡಿಪಿ ಬೆಳವಣಿಗ, ಹಣಕಾಸಿನ ಕೊರತೆ, ಹೆಚ್ಚುತ್ತಿರುವ ತೈಲ ಬೆಲೆ ಎಲ್ಲಕ್ಕೂ ಹಿಂದಿನ ಯುಪಿಎ ಸರ್ಕಾರದ ನೀತಿಗಳು ಕಾರಣ ಎಂದು ಕೇಂದ್ರ ನಾಯಕರು ಹೇಳುತ್ತಾ ಬಂದಿದ್ದಾರೆ. ಇದೀಗ ನೀತಿ ಆಯೋಗ ಉಪಾಧ್ಯಕ್ಷರು ಇದಕ್ಕೆ ವ್ಯತಿರಿಕ್ತವಾದ   ವಿವರಣೆ ನಿಡಿದ್ದಾರೆ.
"ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಆರ್ಥಿಕ ಪರಿಸ್ಥಿತಿ ಭಯಾನಕವಾಗಿತ್ತು. ಆಡಳಿತ ನೀತಿ ನಿರೂಪಣೆಯು ಸಂಪೂರ್ಣ ನೆಲಕಚ್ಚಿತ್ತು. ಪಾರಂಪರಿಕ ಆರ್ಥಿಕ ಸಮಸ್ಯೆಗಳಿದ್ದವು. ವಿಶ್ವ ಆರ್ಥಿಕತೆಯೂ ಸಹ ಉತ್ತಮವಾದ ಪರಿಸ್ಥಿತಿಯಲ್ಲಿರಲಿಲ್ಲ. ಇಷ್ಟೆಲ್ಲದರ ಹೊರತಾಗಿಯೂ ಈ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ನಾನು ಭಾವಿಸುತ್ತೇನೆ "ಕುಮಾರ್ ಹೇಳಿದರು.
2014 ರಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಹಣದುಬ್ಬರವು ಶೇ. 9ರಾಷ್ಟಿತ್ತು, ಬೆಳವಣಿಗೆ ದರ ಶೇಕಡ 6 ಕ್ಕಿಂತ ಕಡಿಮೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಆಗಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ "2.8 ರಿಂದ  6.4 ಶೇಕಡಾ ವರೆಗೆಹಣದುಬ್ಬರ ಹೆಚ್ಚಳವಾಗಲು ಕಾರಣರಾಗಿದ್ದರು. ಆದರೆ ನಾವಿಂದು  6.7 ರಷ್ಟು ಬೆಳವಣಿಗೆ ದರವನ್ನು ಸಾಧಿಸಿದ್ದೇವೆ.  ಕಳೆದ ತ್ರೈಮಾಸಿಕದಲ್ಲಿಬೆಳವಣಿಗೆ ದರದ ಪ್ರಮಾಣ  7.7 ಶೇಕಡಾಗೆ ತಲುಪಿದೆ. ಹಣದುಬ್ಬರ ಪ್ರಮಾಣ 3.8 ಶೇಕಡಾ ಆಗಿದೆ.ಇದು ಗಮನಾರ್ಹ ಬೆಳವಣಿಗೆ ಎಂದು ಪರಿಗಣಿಸಬಹುದು.
2017-18ರಲ್ಲಿ ಹಣಕಾಸಿನ ಕೊರತೆಯು 3.5 ಶೇ. ಮತ್ತು ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.3 ಶೇ.ದಷ್ಟಾಗಿದೆ."ಈ ಸರ್ಕಾರವು ಸ್ಥೂಲ ಆರ್ಥಿಕ ಸಮತೋಲನವನ್ನು ಉಳಿಸಿಕೊಂಡಿದೆ ಮತ್ತು ಅದರ ಮಾರ್ಗದಲ್ಲಿ ಬೆಳವಣಿಗೆ ಸಾಧಿಸಿದೆ ಅಷ್ಟೇ ಅಲ್ಲದೆ  ಆರ್ಥಿಕತೆಯನ್ನು ಹೆಚ್ಚು ಸ್ವಚ್ಛಗೊಳಿಸಿದೆ ಮತ್ತು ಹೆಚ್ಚು ಜನೋಪಕಾರಿಯನ್ನಾಗಿಸಿದೆ." ಅವರು ಹೇಳಿದರು.
"ಸರ್ಕಾರ ಗುರುತಿಸಿರುವ ಒಂದು ಸ್ಪಷ್ಟವಾದ ಪಾತ್ರ ರೈತರ ಆದಾಯವಾಗಿದೆ.ಇದೀಗ ಆ ಅಂಶವನ್ನು ಬಜೆಟ್ ನಲ್ಲಿ ಹೇಳುವವರಿದ್ದಾರೆ ಎಂದು ನಾನು ಭಾವಿಸುತ್ತೇನೆ.. ಕೃಷಿ ಕ್ಷೇತ್ರವು ಹಿಂದುಳಿದ ವಲಯ ಮತ್ತು ಇದಕ್ಕೆ ಸಾಕಷ್ಟು ಸುಧಾರಣೆಗಳು ಬೇಕಾಗುತ್ತವೆ. "
ರಫ್ತು ಕ್ಷೇತ್ರದಲ್ಲಿನ ಕಾರ್ಯಕ್ಷಮತೆ ಕಳವಳಕ್ಕೆ ಕಾರಣವಾಗಿದೆ ನೀರಿನ ಬಿಕ್ಕಟ್ಟು ಬಲವಾಗುತ್ತಾ ಸಾಗಿದೆ., ಶಿಕ್ಷಣದ ಗುಣಮಟ್ಟದ ಕಡೆ ಗಮನಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. "ಇವುಗಳು ದೀರ್ಘಕಾಲದ ಸಮಸ್ಯೆಗಳಾಗಿವೆ ಆದರೆ ಅವರು ಈ ಸಮಸ್ಯೆಗಳನ್ನು ಸರ್ಕಾರ ಗುರುತಿಸಿದೆ. ಅದಕ್ಕಾಗಿ ಸರ್ಕಾರವನ್ನು ಮೆಚ್ಚಬೇಕು. ಸಮಸ್ಯೆಗಳನ್ನು ಮರೆಮಾಚಲು, ಅಥವಾ ಮುಚ್ಚಿಡಲು ಅದು ಪ್ರಯತ್ನಿಸುತ್ತಿಲ್ಲ.ಅವರು ಹೊಸ ವಿಧಾನಗಳನ್ನು ಪ್ರಯೋಗಿಸುತ್ತಿದ್ದಾರೆ.. ಶಿಕ್ಷಣ ಗುಣಮಟ್ಟ, ಜಲ ಸಂರಕ್ಷಣೆ, ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಕಾರ್ಯಕ್ರಮ ನಿರೂಪಿಸಬೇಕು.ಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.