ವಾರೆನ್ ಬಫೆಟ್ ಹಿಂದಿಕ್ಕಿದ ಫೇಸ್ ಬುಕ್ ಸಂಸ್ಥಾಪಕ ಝುಕರ್‍ಬರ್ಗ್ ವಿಶ್ವದ ಮೂರನೇ ಶ್ರೀಮಂತ!
ಫೇಸ್ ಬುಕ್ ಇಂಕ್ ನ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

Published On :
ನ್ಯೂಯಾರ್ಕ್: ಫೇಸ್ ಬುಕ್ ಇಂಕ್ ನ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ತಂತ್ರಜ್ಞಾನವು ಸಂಪತ್ತಿನ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ದೃಢಪಡಿಸಿದ್ದಾರೆ
ಅಮೆಜಾನ್.ಕಾಂ ಸಂಸ್ಥಾಪಕ ಜೆಫ್ ಬೆಝೋಸ್ ಮತ್ತು ಮೈಕ್ರೋಸಾಫ್ಟ್ ಕಾರ್ಪ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಬಳಿಕ ಬಳಿಕದ ಸ್ಥಾನವನ್ನು ಝುಕರ್‍ಬರ್ಗ್ ಪಡೆದಿದ್ದಾರೆ. ಶುಕ್ರವಾರ ಫೇಸ್ ಬುಕ್ ಷೇರುಗಳ ಮೌಲ್ಯ ಶೆ.2.4ರಷ್ಟು ಏರಿಕೆ ಕಂಡಿದ್ದು ಪ್ರಸಿದ್ಧ ಉದ್ಯಮಿ ವಾರನ್ ಬಫೆಟ್ ಅವರನ್ನೂ ಹಿಂದಿಕ್ಕಿ ಝುಕರ್‍ಬರ್ಗ್ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿದ ಮೂರು ಸಂಸ್ಥೆಗಳ ದಿಗ್ಗಜರು ವಿಶ್ವದ ಟಾಪ್ ತ್ರೀ ಶ್ರೀಮಂತರಾಗಿದ್ದಾರೆ.
ಝುಕರ್‍ಬರ್ಗ್ ಒಟ್ಟು ಆಸ್ತಿ ಮೌಲ್ಯ81.6 ಶತಕೋಟಿ ಡಾಲರ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Facebookಫೇಸ್ ಬುಕ್Mark Zuckerbergಮಾರ್ಕ್ ಝುಕರ್ಬರ್ಗ್ವಾರೆನ್ ಬಫೆಟ್ವಿಶ್ವದ ಶ್ರೀಮಂತ ವ್ಯಕ್ತಿWarren Buffetrichest person in the world
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


