ವಾಣಿಜ್ಯ

ಕೃಷಿ ಕಮಾಡಿಟಿ ವ್ಯಾಪಾರದಿಂದ ರೈತರ ಆದಾಯ ದ್ವಿಗುಣ: ಅರುಣ್ ಜೇಟ್ಲಿ

ಕೃಷಿ ಸರಕುಗಳ ವ್ಯಾಪಾರ ಆರಂಭಿಸುವುದರಿಂದ ಬಹುಪಾಲು ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಕೃಷಿ ಕಮಾಡಿಟಿ ವ್ಯಾಪಾರದಿಂದ ರೈತರ ಆದಾಯ ದ್ವಿಗುಣ: ಅರುಣ್ ಜೇಟ್ಲಿ
ಅರುಣ್ ಜೇಟ್ಲಿ,
Published On :
ನವದೆಹಲಿ: ಕೃಷಿ ಸರಕುಗಳ ವ್ಯಾಪಾರ ಆರಂಭಿಸುವುದರಿಂದ ಬಹುಪಾಲು ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 
ದೇಶದ ಮೊದಲ ಅಲಸಂದೆ ಕಾಳು ಕೃಷಿ ಸಂಬಂಧಿತ ವೈವಿದ್ಯಮಯ ತಳಿಗಳ ಮಳಿಗೆ ಉದ್ಘಾಟನೆಮಾಡಿದ್ದ ಜೇಟ್ಲಿ ಭಾರತೀಯ ಆರ್ಥಿಕತೆಯಲ್ಲಿ ರೈತ ಸಮುದಾಯದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ, ಸಮಾಜದ ಎಲ್ಲಾ ವರ್ಗಗಳನ್ನು, ಅದರಲ್ಲೂ ವಿಶೇಷವಾಗಿ ರೈತರಿಗೆ ಆರ್ಥಿಕ ಬೆಳವಣಿಗೆಯ ಲಾಭಗಳು ಸಿಗುವಂತೆ ಮಾಡಲುಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
"ರೈತರು ತಮ್ಮ ಶ್ರಮದ ಕೆಲಸ ಗಳಿಂದ ವ್ಯತಿರಿಕ್ತ ಪರಿಸ್ಥಿತಿಯನ್ನು ಬದಲಿಸಿದ್ದಾರೆ. ಆದಾಗ್ಯೂ, ಅನೇಕ ಬಾರಿ, ಅವರು ತಮ್ಮ ಉತ್ಪಾದನೆಗೆ ತಕ್ಕ ಬೆಲೆ ಸಿಗದೆ ಕಷ್ಟವನ್ನು ಅನುಭವಿಸಿದ್ದಾರೆ. ಕಳೆದ ವರ್ಷಗಳಲ್ಲಿ ನಾವು ರೈತರ ಪರವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಿದರಿಂದ ರೈತರಿಗೆ ಅನುಕೂಲವಾಗುತ್ತಿದೆ.  ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ, ನಾವು ಯೋಜನೆ ರೂಪಿಸುತ್ತಿದ್ದೇವೆ" ಜೇಟ್ಲಿ ಹೇಳಿದರು.
ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ (ಎನ್ ಸಿಡಿಇಎಕ್ಸ್) ವಿನ್ಯಾಸಗೊಳಿಸಿದ ಈ ಸರಕನ್ನು ತಮ್ಮ ಉತ್ಪಾದನೆಗಾಗಿ ನಿರ್ದಿಷ್ಠ ಬೆಲೆ ಪಡೆಯುವಲ್ಲಿ ರೈತರಿಗೆ ಸಹಕಾರಿಆಗಲಿದೆ ಎಂದು ನಿರೀಕ್ಷಿಆಲಾಗಿದೆ. ಹೆಡ್ಜಿಂಗ್ ಟೂಲ್ ರೈತರಿಗಾಗುವ ನಷ್ಟವನ್ನು ತಪ್ಪಿಸುತ್ತದೆ ಹಾಗೂ ದರ ಸಮರದ ವೇಳೆ ಅವರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವುದಕ್ಕೆ ಸಹಕಾರ ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.