ವಾಣಿಜ್ಯ

ಎಸ್‏ಬಿಐ ಕನಿಷ್ಟ ಬ್ಯಾಲೆನ್ಸ್ ರೂ.1 ಸಾವಿರಕ್ಕೆ ಇಳಿಕೆ?

ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಗೆ ಶುಲ್ಕವಿಧಿಸುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ನಗರ ಪ್ರದೇಶಗಳ ಕನಿಷ್ಟ ಬ್ಯಾಲೆನ್ಸ್ ಅನ್ನು 1 ಸಾವಿರ ರು.ಗೆ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಎಸ್‏ಬಿಐ ಕನಿಷ್ಟ ಬ್ಯಾಲೆನ್ಸ್ ರೂ.1 ಸಾವಿರಕ್ಕೆ ಇಳಿಕೆ?
ಎಸ್ ಬಿಐ (ಸಂಗ್ರಹ ಚಿತ್ರ)
Published On :
ಮುಂಬೈ: ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಗೆ ಶುಲ್ಕವಿಧಿಸುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ನಗರ ಪ್ರದೇಶಗಳ ಕನಿಷ್ಟ  ಬ್ಯಾಲೆನ್ಸ್ ಅನ್ನು 1 ಸಾವಿರ ರು.ಗೆ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ವಾಣಿಜ್ಯ ಕ್ಷೇತ್ರದ ವಾಹಿನಿಯೊಂದು ವರದಿ ಮಾಡಿರುವಂತೆ, ಪ್ರಸ್ತುತ ನಗರ ಪ್ರದೇಶಗಳಲ್ಲಿರುವ ಎಸ್ ಬಿಐ ಗ್ರಾಹಕರು ಖಾತೆಯಲ್ಲಿ ಕನಿಷ್ಚ 3000 ರು.ಬ್ಯಾಲೆನ್ಸ್ ಇಡಬೇಕಿದೆ. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಟ 1 ಸಾವಿರ  ರು.ಗಳನ್ನು ಇಡಬೇಕಿದೆ. ಎಸ್ ಬಿಐ ಆಡಳಿತ ಮಂಡಳಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಕನಿಷ್ಟ ಬ್ಯಾಲೆನ್ಸ್ ಅನ್ನು ಕೂಡ 1 ಸಾವಿರ ರು.ಗಳಿಗೆ ಇಳಿಕೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿವೆ ಎನ್ನಲಾಗಿದೆ.
ಇತ್ತೀಚೆಗೆ ಕೇಂದ್ರ ವಿತ್ತ ಸಚಿವಾಲಯ ಬಿಡುಗಡೆ ಮಾಡಿದ್ದ ದತ್ತಾಂಶಗಳ ಅನ್ವಯ ಎಸ್ ಬಿಐನ ಆದಾಯ 17.72 ಬಿಲಿಯನ್ ಆಗಿತ್ತು. ಇತ್ತು ಎಸ್ ಬಿಐನ 2017-18ನೇ ಸಾಲಿನ ಎರಡನೆಯ ತ್ರೈಮಾಸಿಕ ಲಾಭಕ್ಕಿಂತಲೂ  ಅಧಿಕವಾಗಿದ್ದು, ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಂದ ಪಡೆಯಲಾಗಿದ್ದ ಶುಲ್ಕಗಳೂ ಈ ಆದಾಯದಲ್ಲಿ ಸೇರಿತ್ತು ಎನ್ನಲಾಗಿದೆ. ಪ್ರಸ್ತುತ ಎಸ್ ಬಿಐನಲ್ಲಿ ಸುಮಾರು 405 ಮಿಲಿಯನ್ ಗ್ರಾಹಕರಿದ್ದು, ಈ ಪೈಕಿ ಸುಮಾರು 17.71  ಬಿಲಿಯನ್ ಹಣವನ್ನು ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಂದ ಶುಲ್ಕದ ರೂಪದಲ್ಲಿ ಪಡೆಯಲಾಗಿದೆ.
ಕಳೆದ ಏಪ್ರಿಲ್ 1ರಿಂದ ಈ ನಿಯಮ ಜಾರಿಯಾಗಿತ್ತಾದರೂ, ಎಸ್ ಬಿಐನ ಶುಲ್ಕ ದುಬಾರಿಯಾದ ಕುರಿತು ಗ್ರಾಹಕರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ತೀವ್ರ ಒತ್ತಡದ ಮೇರೆಗೆ ಎಸ್ ಬಿಐ ತನ್ನ ಕನಿಷ್ಟ  ಬ್ಯಾಲೆನ್ಸ್ ಮೇಲಿನ ಶುಲ್ಕದಲ್ಲಿ ಕಡಿತ ಮಾಡಿತ್ತು. ಅಲ್ಲದೆ ನಗರ ಪ್ರದೇಶಗಳಲ್ಲಿದ್ದ ಕನಿಷ್ಟ ಬ್ಯಾಲೆನ್ಸ್ ಮಿತಿಯನ್ನು 5 ಸಾವಿರ ರು.ಗಳಿಂದ 3 ಸಾವಿರ ರು.ಗಳಿಗೆ ಇಳಿಕೆ ಮಾಡಿತ್ತು.
ಇದೀಗ ಈ ಮೊತ್ತವನ್ನೂ ಕೂಡ 1 ಸಾವಿರ ರು.ಗೆ ಇಳಿಕೆ ಮಾಡಲು ಎಸ್ ಬಿಐ ಆಡಳಿತ ಮಂಡಳಿ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.