2 ಸಾವಿರ ರು. ವರೆಗಿನ ನಗದುರಹಿತ ವಹಿವಾಟಿಗೆ ಶುಲ್ಕವಿಲ್ಲ: ಅರುಣ್ ಜೇಟ್ಲಿ
ಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Published On :
ನವದೆಹಲಿ: ಡೆಬಿಟ್ ಕಾರ್ಡ್ ಬಳಸಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೇವಲ ಡೆಬಿಟ್ ಕಾರ್ಡ್ ಮಾತ್ರವಲ್ಲದೇ ಭೀಮ್ ಆ್ಯಪ್ ಮತ್ತು ಇತರೆ ನಗದು ರಹಿತ ಸೇವೆಗಳಿಗೂ ಇದು ಅನ್ವಯವಾಗಲಿದ್ದು, 2 ಸಾವಿರ ವರೆಗಿನ ಮೊತ್ತ ಪಾವತಿಗೆ ಯಾವುದೇ ರೀತಿಯ ಶುಲ್ಕವಿಲ್ಲ ಎಂದು ಜೇಟ್ವಿ ಅವರು ಹೇಳಿದ್ದಾರೆ. ಈ ಹಿಂದೆಯೇ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಅದರಂತೆ ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಎಂಡಿಆರ್ ಶುಲ್ಕವನ್ನು ರದ್ದುಗೊಳಿಸುವ ಸಂಬಂಧ ನಿರ್ಧಾರ ಕೈಗೊಂಡಿತ್ತು. ಇದೀಗ ಈ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿತ್ತ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು, 2017ರಲ್ಲಿ ಭೀಮ್ ಆ್ಯಪ್ ನ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ವಹಿವಾಟಿನ ಪ್ರಮಾಣದಲ್ಲಿ ಶೇ,86ರಷ್ಚು ಏರಿಕೆಯಾಗಿದೆ. ಒಟ್ಟು ಸುಮಾರು 145.6 ಮಿಲಿಯನ್ ಬಳಕೆದಾರರು ಈ ಆ್ಯಪ್ ಅನ್ನು ಬಳಕೆ ಮಾಡಿದ್ದು, ಒಟ್ಟು 13, 174 ಕೋಟಿ ವಹಿವಾಟು ನಡೆದಿದೆ. ಪ್ರಸ್ತುತ ಸರ್ಕಾರ ಎಂಡಿಆರ್ ಶುಲ್ಕ ತೆರವು ಮಾಡಿರುವುದರಿಂದ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ನೂತನ ನಿಯಮ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Businessವಾಣಿಜ್ಯArun Jaitleyಅರುಣ್ ಜೇಟ್ಲಿನವದೆಹಲಿNew DelhiDebit cardಡೆಬಿಟ್ ಕಾರ್ಡ್Cashless transactionನಗದು ರಹಿತ ವಹಿವಾಟು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


