2017 ನೇ ಸಾಲಿನಲ್ಲಿ ಏರ್ ಇಂಡಿಯಾದ ಲಾಭ ದುಪ್ಪಟ್ಟು!
ನಿರಂತರವಾಗಿ ಸುಧಾರಣೆ ಕಾಣುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ 2017 ನೇ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ಆದಾಯ ಗಳಿಸಿದೆ.

Published On :
ನವದೆಹಲಿ: ನಿರಂತರವಾಗಿ ಸುಧಾರಣೆ ಕಾಣುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ 2017 ನೇ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ಆದಾಯ ಗಳಿಸಿದೆ.
ಸರ್ಕಾರದ ಮಾಹಿತಿಯ ಪ್ರಕಾರ ಏರ್ ಇಂಡಿಯಾ 2017 ರಲ್ಲಿ 298.03 ಕೋಟಿ ಆದಾಯ ಗಳಿಸಿದ್ದು, ಆದಾಯ ದುಪ್ಪಟ್ಟಾಗಿದೆ. ಏರ್ ಇಂಡಿಯಾಗೆ 5,765.16 ಕೋಟಿ ರೂಪಾಯಿ ಸಾಲವಿದ್ದು, ಬಂಡವಾಳ ಹಿಂತೆಗೆತಕ್ಕೊಳಗಾಗಿರುವ ವಿಮಾನ ಸಂಸ್ಥೆ 2015 ನೇ ಸಾಲಿನಲ್ಲಿ 105 ಕೋಟಿ ರೂಪಾಯಿ ಲಾಭ ಗಳಿಸಿತ್ತು.
ಕೇಂದ್ರ ಸರ್ಕಾರ ರೂಪಿಸಿದ್ದ ಯೋಜನೆಯಡಿ ಏರ್ ಇಂಡಿಯಾ ಸಂಸ್ಥೆ ಕಾರ್ಯನಿರ್ವಹಣೆ ಹಾಗೂ ಲಾಭ ಗಳಿಸುವಿಕೆಯಲ್ಲಿ ನಿರಂತರವಾಗಿ ಸುಧಾರಣೆ ಕಾಣುತ್ತಿದೆ, ಎಂದು ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಲೋಕಸಭೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


