ಬಜೆಟ್ ವ್ಯತಿರಿಕ್ತ ಪರಿಣಾಮ; ಸತತ ಮೂರನೇ ದಿನವೂ ಸೆನ್ಸೆಕ್ಸ್ ಕುಸಿತ
2018-19ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಮುಂದುವರೆದ್ದು, ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಕುಸಿತ ಕಂಡಿದೆ.

Published On :
ಮುಂಬೈ: 2018-19ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಮುಂದುವರೆದ್ದು, ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಕುಸಿತ ಕಂಡಿದೆ.
ಇಂದು ವಹಿವಾಟು ಆರಂಭದಿಂದಲೇ ಷೇರುಮಾರುಕಟ್ಟೆ ನಕಾರಾತ್ಮಕ ವಹಿವಾಟು ಆರಂಭಿಸಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಇಳಿಕೆ ಕಂಡು 34,520.80. ಅಂಕಗಳಿಗೆ ಕುಸಿದಿದೆ. ಕಳೆದ ಬುಧವಾರವಷ್ಟೇ ದಾಖಲೆ 36 ಸಾವಿರ ಅಂಕಗಳಿಗೇರಿದ್ದ ಸೆನ್ಸೆಕ್ಸ್ ಕೇವಲ 3 ದಿನಗಳಲ್ಲಿ ಬರೊಬ್ಬರಿ 1500 ಅಂಕಗಳಷ್ಟು ಕುಸಿತ ಕಂಡಿದೆ. ಕಳೆದ ನಾಲ್ಕು ವಹಿವಾಟುಗಳಲ್ಲಿ ಸೆನ್ಸೆಕ್ಸ್ 1,216.50 ಅಂಕಗಳ ಕಳೆದುಕೊಂಡಿದ್ದು, ಸುಮಾರು ಶೇ.10ರಷ್ಟು ನಷ್ಟ ಅನುಭವಿಸಿದೆ.
ಇಂದಿನ ವಹಿವಾಟಿನಲ್ಲಿ ನಿಫ್ಟಿ ಕೂಡ ಬರೊಬ್ಬರಿ 173.80 ಅಂಕಗಳ ಕುಸಿತ ಕಾಣುವ ಮೂಲಕ 10,586.80 ಅಂಕಗಳಿಗೆ ಕುಸಿದಿದೆ. ಉಕ್ಕು, ರಿಯಲ್ ಎಸ್ಟೇಟ್, ಕ್ಯಾಪಿಟಲ್ ಗೂಡ್ಸ್, ಬ್ಯಾಂಕಿಂಗ್ ಮತ್ತು ಇಂಧನ, ಗ್ಯಾಸ್ ಕ್ಷೇತ್ರಗಳ ಷೇರುಗಳಿಗೆ ಭಾರಿ ನಷ್ಟವಾಗಿದ್ದು, ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಯೆಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಲಿಮಿಟೆಡ್, ಎಸ್ ಬಿಐ, ಆಕ್ಸಿಸ್ ಬ್ಯಾಂಕ್, ಹೀರೋ ಮೋಟೋಕಾರ್ಪ್, ಬಜಾಜ್ ಆಟೋ, ಟಾಟಾ ಸ್ಟೀಲ್, ಹಿಂದೂಸ್ತಾನ್ ಯೂನಿಲಿವರ್, ಎಲ್ ಅಂ್ ಟಿ, ಎಂ ಅಂಡ್ ಎಮ್, ಅದಾನಿ ಪೋರ್ಟ್, ಕೋಟಕ್ ಬ್ಯಾಂಕ್ ಮತ್ತು ಆರ್ ಐಎಲ್ ಸಂಸ್ಥೆಗಳ ಷೇರುಮೌಲ್ಯದಲ್ಲಿ ಶೇ.3.36ರಷ್ಟು ಕುಸಿತ ಕಂಡಿದೆ.
ಇಂಧನ ದರ ಏರಿಕೆ, ಏಷ್ಯನ್ ಮಾರುಕಟ್ಟೆಯಲ್ಲಿನ ನೀರಸ ಪ್ರತಿಕ್ರಿಯೆ ಮತ್ತು ಕೇಂದ್ರ ಬಜೆಟ್ ನ ಪರಿಣಾಮ ಮಾರುಕಟ್ಟೆ ಮೇಲೆ ನಾಳೆಯೂ ಮುಂದುವರೆಯಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ಜಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈSensexಸೆನ್ಸೆಕ್ಸ್Indian Stock Exchangeಭಾರತೀಯ ಷೇರುಮಾರುಕಟ್ಟೆUnion budget 2018ಕೇಂದ್ರ ಬಜೆಟ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


