ವಾಣಿಜ್ಯ

ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್, ಮುಂದುವರೆದ ಭಾರತೀಯ ಷೇರುಮಾರುಕಟ್ಟೆ ನಾಗಾಲೋಟ

ಎರಡು ದಿನಗಳ ರಜೆ ಬಳಿಕ ಭಾರತೀಯ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದು, ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆಯ ಅಂಶಗಳ ಏರಿಕೆ ಮೂಲಕ ನೂತನ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದೆ.

ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್, ಮುಂದುವರೆದ ಭಾರತೀಯ ಷೇರುಮಾರುಕಟ್ಟೆ ನಾಗಾಲೋಟ
ಸಂಗ್ರಹ ಚಿತ್ರ
Published On :
ಮುಂಬೈ: ಎರಡು ದಿನಗಳ ರಜೆ ಬಳಿಕ ಭಾರತೀಯ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದು, ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆಯ ಅಂಶಗಳ ಏರಿಕೆ ಮೂಲಕ ನೂತನ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದೆ. 
ಬಿಎಸ್ ಇ ಸೆನ್ಸೆಕ್ಸ್ ಇಂದು ಬೆಳಗ್ಗೆ 250 ಅಂಕಗಳ ಏರಿಕೆ ಕಾಣುವ ಮೂಲಕ ಇದೇ ಮೊದಲ ಬಾರಿಗೆ 38,200ರ ಗಡಿದಾಟಿದ್ದು, ಎನ್ ಎಸ್ ಇ ನಿಫ್ಟಿ ಕೂಡ ಇದೇ ಮೊದಲ ಬಾರಿಗೆ 11, 500 ಅಂಕಗಳಿಗೇರಿದೆ. ಸೆನ್ಸೆಕ್ಸ್ 263.03 ಅಂಕಗಳು (0.69 %) ಏರಿಕೆಯಾಗಿ 38,210.94 ಅಂಕಗಳಿಗೆ ತಲುಪಿದ್ದು ದಾಖಲೆಯಾಗಿದೆ. ಈ ಹಿಂದೆ ಆಗಸ್ಟ್ 9 ರಂದು ಸೆನ್ಸೆಕ್ಸ್ 38,076.23 ಅಂಕ ತಲುಪಿದ್ದು ದಾಖಲೆಯಾಗಿತ್ತು. ಶುಕ್ರವಾರ ಸೆನ್ಸೆಕ್ಸ್ ನಲ್ಲಿ 284.32 ಅಂಕಗಳು ಏರಿಕೆಯಾಗಿದ್ದವು. 
ಇನ್ನು ರಾಷ್ಟ್ರೀಯ  ಷೇರು ಸೂಚ್ಯಂಕ ನಿಫ್ಟಿ ಕೂಡ ಏರಿಕೆ ಕಂಡಿದ್ದು, ಇಂದು 46.50 ಅಂಕ ಅಂದರೆ 0.40 % ಏರಿಕೆಯಾಗುವ ಮೂಲಕ 11,517.25 ಅಂಕಕ್ಕೆ ತಲುಪಿದೆ. ಇಂದಿನ ವಹಿವಾಟಿನಲ್ಲಿ ಬಂಡವಾಳ ಸರಕುಗಳು, ಲೋಹಗಳು, ಸಿರಾಸ್ಥಿ ಹಾಗೂ ಬ್ಯಾಂಕಿಂಗ್ ವಲಯಗಳ  ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಕೋಲ್ ಇಂಡಿಯಾ, ಲಾರ್ಸನ್ ಅಂಡ್ ಟರ್ಬೋ. ಒಎನ್ ಜಿಸಿ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.