ಪೆಪ್ಸಿಕೋ ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಇಂದ್ರಾ ನೂಯಿ
ಪೆಪ್ಸಿಕೋ ಸಂಸ್ಥೆಯ ಸಿಇಒ ಸ್ಥಾನದಿಂದ ಇಂದ್ರಾ ನೂಯಿ ಕೆಳಗಿಳಿಯಲಿದ್ದಾರೆ.

Published On :
ಪೆಪ್ಸಿಕೋ ಸಂಸ್ಥೆಯ ಸಿಇಒ ಸ್ಥಾನದಿಂದ ಇಂದ್ರಾ ನೂಯಿ ಕೆಳಗಿಳಿಯಲಿದ್ದಾರೆ.
ತಂಪುಪಾನಿಯ ತಯಾರಿಕಾ ಸಂಸ್ಥೆ ಪೆಪ್ಸಿಕೋ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 12 ವರ್ಷಗಳ ನಂತರ ಸಿಇಒ ಸ್ಥಾನದಿಂದ ಇಂದ್ರಾ ನೂಯಿ ಕೆಳಗಿಳಿಯುತ್ತಿದ್ದು, ನೂತನ ಸಿಇಒ ಆಗಿ ಅಧ್ಯಕ್ಷ ರಾಮನ್ ಲಗುವರ್ಟಾ ನೇಮಕಗೊಂಡಿದ್ದಾರೆ.
ಅ.03 ರಂದು ರಾಮನ್ ಲಗುವರ್ಟಾ ಸಿಇಒ ಆಗಿ ಅಧಿಕಾರ ವಹಿಸಿಒಕೊಳ್ಳಲಿದ್ದು, ಆಡಳಿತ ಮಂಡಳಿಗೂ ಸೇರ್ಪಡೆಯಾಗಲಿದ್ದಾರೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪೆಪ್ಸಿಕೋ ಸಂಸ್ಥೆಯಲ್ಲಿ 24 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿರುವ ಇಂದ್ರಾ ನೂಯಿ 2019 ರ ವರೆಗೂ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. 2006 ರಲ್ಲಿ ನೂಯಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಂಸ್ಥೆಯ ಷೇರುಗಳು ಶೇ.78 ರಷ್ಟು ಏರಿಕೆ ಕಂಡಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


