2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 7.3ರಷ್ಟಾಗಲಿದೆ: ವಿಶ್ವಬ್ಯಾಂಕ್ ಭವಿಷ್ಯ
ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ತರಾತುರಿಯ ಜಾರಿಯಿಂದಾಗಿ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಬೆಳವಣಿಗೆ ದರ 2018ರಲ್ಲಿ...

Published On :
ವಾಷಿಂಗ್ಟನ್: ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ತರಾತುರಿಯ ಜಾರಿಯಿಂದಾಗಿ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಬೆಳವಣಿಗೆ ದರ 2018ರಲ್ಲಿ ಪುಟಿದೇಳಲಿದ್ದು ಶೇ. 7.3ರಷ್ಟಾಗಲಿದೆ ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ.
ಅದೇ ರೀತಿ 2019 ಮತ್ತು 2020ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆ ಶೇಕಡ 7.5ರಷ್ಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮುನ್ಸೂಚನೆ ನೀಡಿದೆ.
ದಕ್ಷಿಣ ಏಷ್ಯಾದ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ವರದಿ ನೀಡಿದ್ದು ಆ ಪ್ರಕಾರ 2017ರಲ್ಲಿ 6.7ರಷ್ಟಿದ್ದ ಭಾರತದ ಆರ್ಥಿಕ ಬೆಳವಣಿಗೆ 2018ರಲ್ಲಿ 7.3ಕ್ಕೆ ಏರಿಕೆಯಾಗಲಿದೆ. ಖಾಸಗಿ ಹೂಡಿಕೆ ಮತ್ತು ಖಾಸಗೀ ಬಳಕೆಯಲ್ಲಿ ನಿರಂತರವಾದ ಚೇತರಿಕೆಯಿಂದಾಗಿ ಈ ಪ್ರಗತಿ ಸಾಧಿಸಲಿದೆ ಎಂದು ಹೇಳಿದೆ.
ಜಾಗತಿಕ ಬೆಳವಣಿಗೆಯಲ್ಲಿ ಚೇತರಿಕೆಯ ಲಾಭ ಪಡೆಯಲು ಹೂಡಿಕೆ ಮತ್ತು ರಫ್ತುಗಳನ್ನು ವೇಗಗೊಳಿಸಲು ಭಾರತ ಶ್ರಮಿಸಬೇಕು ಎಂದು ವಿಶ್ವಬ್ಯಾಂಕ್ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿindiaಭಾರತಆರ್ಥಿಕ ಬೆಳವಣಿಗೆಜಿಎಸ್ಟಿGSTವಿಶ್ವಬ್ಯಾಂಕ್Demonetisationನೋಟು ನಿಷೇಧWorldBankEconomy Growth
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


