ವಾಣಿಜ್ಯ

ಭಾರತೀಯ ಕೈಗಾರಿಕಾ ಉತ್ಪಾದನೆ ಪ್ರಮಾಣ ಶೇ. 7.1ಕ್ಕೆ ಏರಿಕೆ, ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತ

ಭಾರತೀಯ ಕೈಗಾರಿಕೋತ್ಪಾದನೆ ಕ್ಷೇತ್ರವು ಸತತ ನಾಲ್ಕನೇ ಮಾಹೆಯಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೈಗಾರಿಕಾ ಉತ್ಪನ್ನ ಬೆಳವಣಿಗೆ ದರ ಶೇ.7.1ನ್ನು ತಲುಪಿದೆ.

ಭಾರತೀಯ ಕೈಗಾರಿಕಾ ಉತ್ಪಾದನೆ ಪ್ರಮಾಣ ಶೇ. 7.1ಕ್ಕೆ ಏರಿಕೆ,  ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಭಾರತೀಯ ಕೈಗಾರಿಕೋತ್ಪಾದನೆ ಕ್ಷೇತ್ರವು ಸತತ ನಾಲ್ಕನೇ ಮಾಹೆಯಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೈಗಾರಿಕಾ ಉತ್ಪನ್ನ ಬೆಳವಣಿಗೆ ದರ ಶೇ.7.1ನ್ನು ತಲುಪಿದೆ. 
ಪ್ರಮುಖವಾಗಿ ಉತ್ಪಾದನಾ ವಲಯದಲ್ಲಿ ದೃಢವಾದ ಕಾರ್ಯನಿರ್ವಹಣೆ, ಬಂಡವಾಳ ಹೂಡಿಕೆ, ಸರಕುಗಳು ಗ್ರಾಹಕರಿಗೆ ಸಕಾಲಕ್ಕೆ ಸರಬರಾಜಾಗುವ ಕಾರಣ ಹೆಚ್ಚಿನ ಪ್ರಮಣಾದ ಅಭಿವೃದ್ದಿ ಸಾಧ್ಯವಾಗಿದೆ.
ಫೆಬ್ರವರಿ 2018ರಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ವರದಿಯ ಪ್ರಕಾರ ಫ್ಯಾಕ್ಟರಿಔಟ್ ಪುಟ್ ನಲ್ಲಿ ಶೇ.1.2ರಷ್ಟು ಏರಿಕೆಯಾಗಿದೆ. ಕಳೆದ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಐಪಿಐ  ಬೆಳವಣಿಗೆ ದರವು ಕ್ರಮವಾಗಿ ಶೇ.8.54, ಶೇ.7.1, ಶೇ.7.4ರಷ್ಟಿತ್ತು. ಇದೇ ವೇಳೆ ಕಳೆದ ವರ್ಷದ ಏಪ್ರಿಲ್ ವೇಳೆಗೆ ಐಐಪಿ ಬೆಳವಣಿಗೆ ಶೇ 4..7ರಿಂದ ಶೇ 4.3ರಷ್ಟಿತ್ತು ಎಂದು ಕೇಂದ್ರ ಅಂಕಿಅಂಶಗಳ ಕಚೇರಿ (ಸಿ.ಎಸ್.ಓ) ವರದಿ ಮಾಡಿದೆ.
ಚಿಲ್ಲರೆ ಹಣದುಬ್ಬರ ಪ್ರಮಾಣ ಕುಸಿತ
ಈ ಸಾಲಿನ ಮಾರ್ಚ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.4.28ಕ್ಕೆ ಕುಸಿದಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಿ ಕಳೆದ ಮೂರು ತಿಂಗಳಿನಿಂದ ಸತತ ಕುಸಿತ ದಾಖ;ಲಾಗಿದೆ.
ಪ್ರಮುಖವಾಗಿ ತರಕಾರಿ ಹಾಗೂ ಆಹಾರೋತ್ಪನ್ನದ ಬೆಲೆಗಳು ಕಡಿಮೆ ಇರುವ ಕಾರಣ ಹಣದುಬ್ಬರದಲಿ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿದೆ.
ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಆಧರಿಸಿ ಆರ್.ಬಿ.ಐ ಹೊರಡಿಸುವ ದತ್ತಾಂಶದ ಪ್ರಕಾರ ಹಣದುಬ್ಬರ ಪ್ರಮಾಣವು ಫೆಬ್ರವರಿ ಮಾಹೆಯಲ್ಲಿ ಶೇ.4.44 ರಷ್ಟು ಇತ್ತು.
ಆದರೆ ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಚಿಲ್ಲರೆ ಹಣದುಬ್ಬರ ಪ್ರಮಾಣ ತುಸು ಏರಿಕೆಯಾಗಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಹಣದುಬ್ಬರ ಪ್ರಮಾಣವು ಶೇ. 3.89ರಷ್ಟು ದಾಖಲಾಗಿತ್ತು.
ಸಿಎಸ್ಒ ಬಿಡುಗಡೆಗೊಳಿಸಿದ ಅಂಕಿ ಅಂಶಗಳಂತೆ ತರಕಾರಿಗಳಲ್ಲಿನ ಹಣದುಬ್ಬರವು ಮಾರ್ಚ್ ತಿಂಗಳಲ್ಲಿ ಶೇ 11.7 ಕ್ಕೆ ತಗ್ಗಿದೆ. ಅಷ್ಟೇ ಅಲ್ಲದೆ ಮೊಟ್ಟೆ, ಹಾಲು ಮತ್ತುಪ್ರೋಟೀನ್ ಸಮೃದ್ಧ ವಸ್ತುಗಳ ಬೆಲೆಕೂಡ ಕಳೆದ ತಿಂಗಳಿಗಿಂತ ಕಡಿಮೆ ಇದೆ. ಆದರೆ ಹಣ್ಣುಗಳ ಬೆಲೆಗಳಲ್ಲಿ ಮಾತ್ರ ಏರಿಕೆ ದಾಖಾಲಾಗಿದೆ. ಒಟ್ಟಾರೆ ಆಹಾರೋತ್ಪನ್ನದ ಹಣದುಬ್ಬರ ಪ್ರಮಾಣವು ಶೇ.2.81ಕ್ಕೆ ಇಳಿದಿದೆ. ಫೆಬ್ರವರಿಯಲ್ಲಿ ಶೇ. 3.26ರಷ್ಟು ಹಣದುಬ್ಬರ ದಾಖಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.