ಫೋರ್ಬ್ಸ್ ಶತಕೋಟಿ ಒಡೆಯರ ಪಟ್ಟಿ: ಮಿತ್ತಲ್, ಟಾಟಾ ಮತ್ತು ವಿನೋದ್ ಖೋಸ್ಲಾ ಗೆ ಸ್ಥಾನ
ಫೋರ್ಬ್ಸ್ ತಯಾರಿಸಿದ ವಿಶ್ವದ 100 ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ವಾಣಿಜ್ಯ ದಿಗ್ಗಜರಾದ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಮತ್ತು ವಿನೋದ್ ಖೋಸ್ಲಾ ಸ್ಥಾನ ಪಡೆದಿದ್ದಾರೆ.

Published On :
ನ್ಯೂಯಾರ್ಕ್: ಫೋರ್ಬ್ಸ್ ತಯಾರಿಸಿದ ವಿಶ್ವದ 100 ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ವಾಣಿಜ್ಯ ದಿಗ್ಗಜರಾದ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಮತ್ತು ವಿನೋದ್ ಖೋಸ್ಲಾ ಸ್ಥಾನ ಪಡೆದಿದ್ದಾರೆ.
ಏರ್ಸಲರ್ಸ್ ಮಿತ್ತಲ್ ಕಂಪನಿಯ ಅಧ್ಯಕ್ಷ ಹಾಗೂ ಸಿಒಇ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಹಾಗೂ ಸನ್ ಮೈಕ್ರೋಸಿಸ್ಟಮ್ಸ್ ಸಹ ಸಂಸ್ಥಾಪಕ ವಿನೋದ್ ಖೋಸ್ಲಾ ಫೋರ್ಬ್ಸ್ ಪಟ್ಟಿಯಲ್ಲಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಮಿತ್ತಲ್ ಅವರ ಒಟ್ಟು ಆಸ್ತಿ ಮೌಲ್ಯ 16.5 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ ಮತ್ತು ವಿನೋದ್ ಖೋಸ್ಲಾ ಅವರದ್ದು 1.82 ಬಿಲಿಯನ್ ಅಮೆರಿಕನ್ ದಾಲರ್ ನಷ್ಟಿದೆ.ರತನ್ ಟಾಟಾ ಅವರ ಆಸ್ತಿ ಮೌಲ್ಯದ ವಿವರ ಲಭ್ಯವಾಗಿಲ್ಲ.
ಇನ್ನು ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸ್ಥಾನ ಪಡೆದಿದ್ದಾರೆ. ಅವರನ್ನು ಟ್ರಂಪ್ ಆರ್ಗನೈಸೇಷನ್ ಮಾಲೀಕರು ಮತ್ತು ಅಮೆರಿಕದ 45ನೇ ಅಧ್ಯಕ್ಷರು ಎಂದು ಪಟ್ಟಿಯಲ್ಲಿ ಬಣ್ಣಿಸಲಾಗಿದೆ.
ಅಮೇಝಾನ್ ಸಂಸ್ಥಾಪಕ ಜೆಫ್ ಬೆಝಾಸ್, ವರ್ಜಿನ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್, ಬರ್ಕ್ಶೈರ್ ಹ್ಯಾಥ್ವೆ ಸಿಒಇ ವಾರೆನ್ ಬಫೆಟ್, ಮೈಕೋಸಾಪ್ಟ್ ಸಹ ಸಂಸ್ಥಾಪಕ ಬಿಲ್ಗೇಟ್ಸ್ ಹಾಗೂ ನ್ಯೂಸ್ ಕಾರ್ಪ್ ಕಾರ್ಯಕಾರಿ ಅಧ್ಯಕ್ಷ ರೂಪರ್ಟ್ ಮರ್ಡೋಕ್ ಹೆಸರುಗಳೂ ಸಹ ಪಟ್ಟಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Ratan Tataರತನ್ ಟಾಟಾForbes magazineworld\'s 100 Greatest Living Business MindsLakshmi MittalVinod Khoslaಫೋರ್ಬ್ಸ್ ನಿಯತಕಾಲಿಕವಿಶ್ವದ 100 ಶ್ರೇಷ್ಠ ಉದ್ಯಮಿಗಳುಲಕ್ಷ್ಮಿ ಮಿತ್ತಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


