ಹೊಸ ಸರಣಿಯ ಐಫೋನ್ ಗಳ ಮಾರುಕಟ್ಟೆ ಪ್ರವೇಶದ ಬೆನ್ನಲ್ಲೇ ಐಪೋನ್ 7 ಸರಣಿಯ ಬೆಲೆ ಬಾರಿ ಇಳಿಕೆ!
ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

Published On :
ನವದೆಹಲಿ: ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.
ನಿನ್ನೆಯಷ್ಟೇ ಆ್ಯಪಲ್ ಸಂಸ್ಥೆ ತನ್ನ ಸ್ಟೀವ್ ಜಾಬ್ಸ್ ಆಡಿಟೋರಿಯಂ ನಲ್ಲಿ ಹೊಸ ಆವೃತ್ತಿಯ ಐಫೋನ್ 8 ಮತ್ತು ಐಫೋನ್ ಎಕ್ಸ್ ಸರಣಿಯ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಭಾರತದಲ್ಲೂ ಈ ಫೋನ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೇವಲ ಒಂದೇ ದಿನದಲ್ಲಿ ಹಳೆಯ ಆವೃತ್ತಿಯ ಐಫೋನ್ ಗಳ ಬೇಡಿಕೆ ಬಾರಿ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಮಾರಾಟ ಸಂಸ್ಥೆಗಳು ದಾಸ್ತಾನು ಖಾಲಿ ಮಾಡಲು ದರ ಇಳಿಕೆ ಮಾಡಲು ಮುಂದಾಗಿದ್ದು, ಐಫೋನ್ 6, ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಸರಣಿಯ ಫೋನ್ ಗಳ ದರದಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.
ಮೂಲಗಳ ಪ್ರಕಾರ ಸುಮಾರು 9 ಸಾವಿರದಿಂದ 10 ಸಾವಿರ ರು.ಗಳ ವರೆಗೂ ದರ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಕೂಡಾ ಆ್ಯಪಲ್ ಸಂಸ್ಥೆ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಬಿಡುಗಡೆ ವೇಳೆ ಅದರ ಹಿಂದಿನ ಆವೃತ್ತಿಗಳ ಬೆಲೆಯನ್ನು ಕಡಿತಗೊಳಿಸಿತ್ತು. ಕಳೆದ ವರ್ಷ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಸಂದರ್ಭದಲ್ಲಿ ಸಂಸ್ಥೆ ತನ್ನ (ಸ್ಟಾಕ್ ಕ್ಲಿಯರೆನ್ಸ್ ಸೇಲ್) ಹಲವು ಮೊಬೈಲ್ ಗಳಿಗೆ ಶೇ.4ರಿಂದ ಶೇ.7.5 ರಷ್ಟು ದರ ಕಡಿತಗೊಳಿಸಿತ್ತು.
ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ ಐಫೋನ್ ನ ನೂತನ ಸರಣಿಯ ಮೊಬೈಲ್ ಬಿಡುಗಡೆಯಾದ ಬಳಿಕ 32 ಜಿಬಿ ಸಾಮರ್ಥ್ಯದ ಐಫೋನ್ 7 ಪ್ಲಸ್ ಬೆಲೆ ರೂ 59,000ಕ್ಕೆ ಇಳಿದಿದೆ. ಈ ಹಿಂದೆ ಇದೇ ಫೋನ್ ರೂ 67,300 ರೂ.ಗಳಷ್ಟಿತ್ತು.
ಉಳಿದಂತೆ ಐಫೋನ್ ನ ವಿವಿಧ ಸರಣಿಯ ನೂತನ ಮತ್ತು ಪರಿಷ್ಕರಿಸಿದ ಬೆಲೆ ಇಂತಿದೆ.
ಐಫೋನ್ 7 ಪ್ಲಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 68,000
ಹಿಂದಿನ ಬೆಲೆ: ರೂ 76,200
ಐಫೋನ್ 7 (32 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 56,200
ಐಫೋನ್ 7 (128GB)
ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,200
ಐಫೋನ್ 6 ಪ್ಲಸ್(32 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 56,100
ಐಫೋನ್ 6s ಪ್ಲಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,000
ಐಫೋನ್ 6 ಗಳು (32 ಜಿಬಿ)
ಪ್ರಸ್ತುತ ಬೆಲೆ: ರೂ 40,000
ಹಿಂದಿನ ಬೆಲೆ: ರೂ 46,900
ಐಫೋನ್ 6ಎಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 55,900
ಐಫೋನ್ 7 ಪ್ಲಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 68,000
ಹಿಂದಿನ ಬೆಲೆ: ರೂ 76,200
ಐಫೋನ್ 7 (32 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 56,200
ಐಫೋನ್ 7 (128GB)
ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,200
ಐಫೋನ್ 6 ಪ್ಲಸ್(32 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 56,100
ಐಫೋನ್ 6s ಪ್ಲಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,000
ಐಫೋನ್ 6 ಗಳು (32 ಜಿಬಿ)
ಪ್ರಸ್ತುತ ಬೆಲೆ: ರೂ 40,000
ಹಿಂದಿನ ಬೆಲೆ: ರೂ 46,900
ಐಫೋನ್ 6ಎಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 55,900
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


