ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲು
ಸಾಲಗಾರರ ಸ್ವತ್ತುಗಳ ಲೆಕ್ಕದಲ್ಲಿ ಭಾರತದಲ್ಲಿ 2 ನೇ ಸ್ಥಾನದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.
Published On :
ಮುಂಬಯಿ: ಸಾಲಗಾರರ ಸ್ವತ್ತುಗಳ ಲೆಕ್ಕದಲ್ಲಿ ಭಾರತದಲ್ಲಿ 2 ನೇ ಸ್ಥಾನದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.
ಈ ವರದಿಯಂತೆ ಬ್ಯಾಂಕ್ ಲಾಭಾಂಶ 20 ಪ್ರತಿಶತದಷ್ಟು ಏರಿದೆ ಕಂಡಿದೆ. ಸೆ. 30 ಕ್ಕೆ ಕೊನೆಗೊಂಡ ಮೂರು ತಿಂಗಳಿನಲ್ಲಿ ಬ್ಯಾಂಕ್ ನ ನಿವ್ವಳ ಲಾಭ 41.51 ಬಿಲಿಯನ್ ರೂಪಾಯಿಗಳಿಗೆ (634 ಮಿಲಿಯನ್ ದಾಲರ್) ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಈ ಲಬಾಂಶದ ಮೊತ್ತವು 34.55 ಬಿಲಿಯನ್ ರೂ. ಆಗಿತ್ತು.
ಬ್ಯಾಂಕ್ ನ ಒಟ್ಟಾರೆ ಸಾಲಗಳ ಶೇಕಡಾವಾರು ಮೊತ್ತ ಶೇ.1.26 ರಷ್ಟು ಏರಿಕೆ ಆಗಿದೆ. ಒಟ್ಟಾರೆ ಸಾಲಗಳ ಶೇಕಡಾವಾರು ಮೊತ್ತ ಹಿಂದಿನ ತ್ರೈಮಾಸಿಕದಲ್ಲಿ ಶೇ.1.24 ಮತ್ತು ಒಂದು ವರ್ಷದ ಹಿಂದೆ ಶೇ. 1.02 ಗಳಷ್ಟು ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HDFC bankHDFC Bank Q2 bank profitHDFC Bank Q2 reportquarterly profit of HDFC Bankಎಚ್ ಡಿ ಎಫ್ ಸಿ ಬ್ಯಾಂಕ್ಎಚ್ ಡಿ ಎಫ್ ಸಿ ಬ್ಯಾಂಕ್ ದ್ವಿತೀಯ ತ್ರೈಮಾಸಿಕ ಲಾಭ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

