ಮಾರುಕಟ್ಟೆ ವಹಿವಾಟು: ಸಗಟು ಹಣದುಬ್ಬರ ಶೇ. 2.6 ಕ್ಕೆ ಇಳಿಕೆ
ಸಪ್ಟೆಂಬರ್ ತಿಂಗಳಿನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ. 2.60 ಕ್ಕೆ ಕುಸಿದಿದೆ. ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆಗಳು ಇಳಿಕೆ ಆಗಿವೆ.
Published On :
ನವದೆಹಲಿ: ಸಪ್ಟೆಂಬರ್ ತಿಂಗಳಿನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ. 2.60 ಕ್ಕೆ ಕುಸಿದಿದೆ. ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆಗಳು ಇಳಿಕೆ ಆಗಿವೆ.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರದಲ್ಲಿ ಆ.2017 ರಲ್ಲಿ ಹಣದುಬ್ಬರವು ನಾಲ್ಕು ತಿಂಗಳ ಗರಿಷ್ಠ ಎಂದರೆ ಶೇ. 3.24 ಕ್ಕೆ ತಲುಪಿತ್ತು. ಸೆ.2016ರಲ್ಲಿ ಇದು ಶೇ. 1.36 ರಷ್ಟಿತ್ತು.
ಇಂದು ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಸೆಪ್ಟೆಂಬರ್ ನಲ್ಲಿ ಆಹಾರ ಹಣದುಬ್ಬರ ಶೇ.2.04 ಕ್ಕೆ ಇಳಿಕೆ ಆಗಿದೆ. ಆಗಸ್ಟ್ ನಲ್ಲಿ ಆಹಾರ ಹಣದುಬ್ಬರವು ಶೇ.5.75 ರಷ್ಟಿತ್ತು..
ತರಕಾರಿ ಬೆಲೆಗಳ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ ಶೇ .15.48 ಕ್ಕೆ ಇಳಿದಿದೆ. ಕಳೆದ ತಿಂಗಳು 44.91 ರಷ್ಟು ದಾಖಲಾಗಿತ್ತು.. ಆದರೆ ಈರುಳ್ಳಿ ಬೆಲೆ ಸೆಪ್ಟೆಂಬರ್ ನಲ್ಲಿ ಶೇ.79.78 ರಷ್ಟು ಏರಿಕೆ ಕಂಡಿದೆ. ಮೊಟ್ಟೆ, ಮಾಂಸ ಮತ್ತು ಮೀನುಗಳ ಬೆಲೆ ಏರಿಕೆ ದರವು ಶೇ.5.47 ರಷ್ಟು ಇದೆ.
ಇದೇ ವೇಳೆ ತಯಾರಿಕಾ ಉತ್ಪನ್ನಗಳಲ್ಲಿ ಹಣದುಬ್ಬರ ಶೇ. 2.72 ಕ್ಕೆ ಏರಿಕೆ ಕಂಡಿದ್ದು , ಆಗಸ್ಟ್ ನಲ್ಲಿ 2.45 ರಷ್ಟು ದಾಖಲಾಗಿತ್ತು.. ಇಂಧನ ಮತ್ತು ವಿದ್ಯುತ್, ಹಣದುಬ್ಬರವು ಆಗಸ್ಟ್ ನಲ್ಲಿ ಶೇ 9.99 ಇದ್ದದ್ದು ಶೇ. 9.01 ಕ್ಕೆ ಇಳಿದಿದೆ. ಬೇಳೆಕಾಳುಗಳು ಹಣದುಬ್ಬರ ಇಳಿಕೆಯಾಗಿದ್ದು ಶೇ 24.26 ಕ್ಕೆ ತಲುಪಿದೆ. ಇದೇ ರೀತಿ ಆಲೂಗೆಡ್ಡೆ ಶೇ.46.52 ಮತ್ತು ಗೋಧಿ ಶೇ. 1.71 ರಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
inflationಹಣದುಬ್ಬರಆಹಾರ ಹಣದುಬ್ಬರwholesale price index (WPI)food articles inflationFuel inflationಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ)ಇಂಧನ ಹಣದುಬ್ಬರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

