ಅಕ್ಟೋಬರ್ ತಿಂಗಳ ಹಣದುಬ್ಬರ 7 ತಿಂಗಳಲ್ಲೇ ಗರಿಷ್ಠ
ಸುಮಾರು ಒಂದು ವರ್ಷಗಳ ನಂತರ ದೈನಂದಿನ ಆಹಾರ ವಸ್ತುಗಳ ಮತ್ತು ತೈಲ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದರ ಪರಿಣಾಮ ಅಕ್ಟೋ ಬರ್ ತಿಂಗಳ....

Published On :
ನವದೆಹಲಿ: ಸುಮಾರು ಒಂದು ವರ್ಷಗಳ ನಂತರ ದೈನಂದಿನ ಆಹಾರ ವಸ್ತುಗಳ ಮತ್ತು ತೈಲ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದರ ಪರಿಣಾಮ ಅಕ್ಟೋ ಬರ್ ತಿಂಗಳ ಸಗಟು ಧಾರಣೆ ಆಧರಿಸಿದ ಹಣದುಬ್ಬರ ಶೇ.3.58ಕ್ಕೆ ಏರಿಕೆಯಾಗಿದ್ದು, ಇದು ಕಳೆದ ಏಳು ತಿಂಗಳಲ್ಲೇ ಅತಿ ಹೆಚ್ಚು ಎಂದು ಸೋಮವಾರ ಸರ್ಕಾರಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಸಗಟು ಧಾರಣೆ ಸೂಚ್ಯಂಕ(ಸಿಪಿಐ) ಆಧರಿಸಿದ ಹಣದುಬ್ಬರ ಸೆಪ್ಟೆಂಬರ್ ನಲ್ಲಿ ಶೇ 3.28ರಷ್ಟಿತ್ತು. ಅಕ್ಟೋಬರ್ ತಿಂಗಳ ಹಣದುಬ್ಬರ 3.46ರಷ್ಟು ಹೆಚ್ಚಾಗುವ ನಿರೀಕ್ಷೆ ಇತ್ತು. ಆದರೆ ಅದು 3.58ಕ್ಕೆ ಏರಿಕೆಯಾಗಿದೆ.
ಕಳೆದ ಶುಕ್ರವಾರ ಕೇಂದ್ರ ಸರ್ಕಾರ 178 ವಸ್ತುಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ.18ಕ್ಕೆ ಇಳಿಕೆ ಮಾಡಿವುದರಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೆಲವು ವಿಶ್ಲೇಷಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


