ವಾಣಿಜ್ಯ

81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್!

ಸತತ ಮೂರನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಲಾಭಾಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸೆನ್ಸೆಕ್ಸ್ 81.07 ಅಂಕಗಳ ಏರಿಕೆ ಕಂಡಿದೆ.

81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್!
ಸಂಗ್ರಹ ಚಿತ್ರ
Published On :

ಮುಂಬೈ: ಸತತ ಮೂರನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಲಾಭಾಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸೆನ್ಸೆಕ್ಸ್ 81.07 ಅಂಕಗಳ ಏರಿಕೆ ಕಂಡಿದೆ.

ಸೆನ್ಸೆಕ್ಸ್ 81.07 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ್ದು, ಒಟ್ಟು 31,109.28 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 95.15 ಅಂಕಗಳ ಏರಿಕೆಯೊಂದಿಗೆ 9,604.90 ಅಂಕಗಳಿಗೆ ಏರಿಕೆಯಾಗಿದ್ದು,  ಗ್ರಾಹಕ ಸರಕುಗಳ ಕ್ಷೇತ್ರದ ಷೇರುಗಳ ಮೌಲ್ಯ ಶೇ.3ರಷ್ಟು ಹೆಚ್ಚಳವಾಗಿದೆ.

ಪ್ರಮುಖವಾಗಿ ಡಾಬರ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಯಂತಹ ಸಂಸ್ಥೆಯಗಳ ಷೇರುಗಳ ಮೌಲ್ಯ ಶೇ.3ರಷ್ಟು ಏರಿಕೆಯಾಗಿದೆ. ಆದರೆ ವೈದ್ಯಕೀಯ ಕ್ಷೇತ್ರದ ಷೇರುಗಳಲ್ಲಿ ಕುಸಿತ ಕಂಡುಬಂದಿದ್ದು, ಸನ್ ಫಾರ್ಮಾ  ಶೇರುಗಳ ಮೌಲ್ಯದಲ್ಲಿ ಶೇ.13.2 ರಷ್ಟು ಕುಸಿತ ಕಂಡುಬಂದಿದೆ. ಕಳೆದ ಶುಕ್ರವಾರ ಸಂಸ್ಥೆ ಬಿಡುಗಡೆ ಮಾಡಿದ್ದ ಮಾರ್ಚ್ ತ್ರೈಮಾಸಿಕ ವರದಿಯಲ್ಲಿ ಸಂಸ್ಥೆಯ ಲಾಭಾಂಶದಲ್ಲಿ ಶೇ.14ರಷ್ಟು ಕುಸಿತವಾಗಿರುವುದು ಕಂಡುಬಂದಿತ್ತು. ಇದೂ  ಕೂಡ ಷೇರು ಮೌಲ್ಯ ಕುಸಿಯಲು ಕಾರಣ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.