ತೆರಿಗೆ ವಂಚಕರನ್ನು ಗುರುತಿಸಿ ವರ್ಗೀಕರಿಸುವ ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಗೆ ಚಾಲನೆ
ಕಪ್ಪು ಹಣ ಮತ್ತು ತೆರಿಗೆ ಕಟ್ಟದಿರುವ ಹಣದ ವಿರುದ್ಧ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ತೆರಿಗೆ ಇಲಾಖೆ ದಾಳಿ ನಡೆಸಿರುವ...

Published On :
ನವದೆಹಲಿ: ಕಪ್ಪು ಹಣ ಮತ್ತು ತೆರಿಗೆ ಕಟ್ಟದಿರುವ ಹಣದ ವಿರುದ್ಧ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ತೆರಿಗೆ ಇಲಾಖೆ ದಾಳಿ ನಡೆಸಿರುವ ವರದಿಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ತೆರಿಗೆ ವಂಚಕರ ಹೆಸರುಗಳನ್ನು ಕೂಡ ವಿವಿಧ ವರ್ಗಗಳಲ್ಲಿ ಪ್ರಕಟಿಸಲಿದೆ.
ಇಂತಹ ವ್ಯವಸ್ಥೆಯನ್ನೊಳಗೊಂಡ ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದರು.
ಅಧಿಕ ನಗದು ಹೊಂದಿರುವುದು ಮತ್ತು ತೆರಿಗೆ ಪಾವತಿಸದ ಹಣ ಸುರಕ್ಷಿತವಲ್ಲ ಎಂದು ಜೇಟ್ಲಿ ಹೇಳಿದರು. ಪ್ರಸ್ತುತ ದೇಶದಲ್ಲಿ 91 ಲಕ್ಷ ಜನ ತೆರಿಗೆ ಪಾವತಿಸುತ್ತಿದ್ದು, ಈ ಸಂಖ್ಯೆ ಮುಂದಿನ ವರ್ಷ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ತೆರಿಗೆ ಕಟ್ಟದಿರುವ ದೂರುಗಳಿಗಿಂತ ತೆರಿಗೆ ಪಾವತಿದಾರರಾಗಿ ಜನರನ್ನು ಪರಿವರ್ತಿಸುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಅಧ್ಯಕ್ಷ ಸುಶಿಲ್ ಚಂದ್ರ ತಿಳಿಸಿದ್ದಾರೆ.
ತೆರಿಗೆ ವಂಚನೆ ದಾಳಿಗೆ ಸಂಬಂಧಪಟ್ಟಂತೆ ನಡೆಸಲಾದ ದಾಳಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ವರದಿಗಳನ್ನು ಪ್ರಕಟಿಸಲಿದೆ. ವೆಬ್ ಸೈಟ್ ನಲ್ಲಿ ಎಲ್ಲಾ ವಿವರಗಳು ದೊರಕಲಿದ್ದು ತೆರಿಗೆ ವಂಚಕರನ್ನು ಗುರುತಿಸಲಾಗುತ್ತದೆ.
ಅತಿ ಅಪಾಯಕಾರಿ, ಮಧ್ಯಮ ಅಪಾಯಕಾರಿ, ಕಡಿಮೆ ಮತ್ತು ಅತಿ ಕಡಿಮೆ ಅಪಾಯಕಾರಿ ಎಂದು ವಿವಿಧ ವರ್ಗಗಳಲ್ಲಿ ತೆರಿಗೆ ವಂಚಕರನ್ನು ವಿಭಾಗಿಸಲಾಗುವುದು.
ಅತಿ ಹೆಚ್ಚು ಅಪಾಯಕಾರಿ ವ್ಯಕ್ತಿಗಳು, ಸಂಘ-ಸಂಸ್ಥೆಗಳ ವಿರುದ್ಧ ದಾಳಿ, ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ನೇರ ವಿಚಾರಣೆಗಳು ನಡೆಯುತ್ತವೆ.ಮಧ್ಯಮ ಅಪಾಯಕಾರಿಗಳಿಗೆ ಸಂದೇಶಗಳು ಅಥವಾ ಇಮೇಲ್ ಮೂಲಕ ಮಾಹಿತಿ ಕಳುಹಿಸಿ ತಿದ್ದಿಕೊಳ್ಳುವಂತೆ ಸೂಚಿಸುತ್ತೇವೆ ಮತ್ತು ಕಡಿಮೆ ಹಾಗೂ ಅತಿ ಕಡಿಮೆ ಅಪಾಯಕಾರಿ ತೆರಿಗೆ ವಂಚಕರನ್ನು ಗಮನಿಸಲಾಗುತ್ತದೆ.
ಇಲ್ಲಿ ತೆರಿಗೆ ವಂಚಕ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


