ಜಿಯೋ ಗ್ರಾಹಕರಿಗೆ ಸದಾವಕಾಶ: ಪ್ರೈಂ ಮೆಂಬರ್ ಶಿಪ್ ಗೆ ಮತ್ತೊಂದು ತಿಂಗಳ ಡೆಡ್ ಲೈನ್?
ಪ್ರೈಂ ಸದಸ್ಯರಾಗಲು ಮಾರ್ಚ್ 31ರ ಒಳಗಡೆ ಸಬ್ ಸ್ಕ್ರೈಬ್ ಮಾಡಬೇಕೆಂದು ಜಿಯೋ ಹೇಳಿತ್ತು. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಇನ್ನು ಒಂದು ತಿಂಗಳು ಈ ...

ನವದೆಹಲಿ: ಪ್ರೈಂ ಸದಸ್ಯರಾಗಲು ಮಾರ್ಚ್ 31ರ ಒಳಗಡೆ ಸಬ್ ಸ್ಕ್ರೈಬ್ ಮಾಡಬೇಕೆಂದು ಜಿಯೋ ಹೇಳಿತ್ತು. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಇನ್ನು ಒಂದು ತಿಂಗಳು ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಜಿಯೋ ಕಂಪೆನಿಯ ಮೂಲಗಳ ಮಾಹಿತಿ ಪ್ರಕಾರ, ಪ್ರೈಂ ಸದಸ್ಯರಾಗಲು ಇದ್ದ ಶೇ.50 ರಷ್ಟು ಗುರಿಯನ್ನು ಜಿಯೋ ಈಗಾಗಲೇ ತಲುಪಿದೆ. ಹೀಗಾಗಿ ಏಪ್ರಿಲ್ 30ರ ವರೆಗೆ ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋ 10 ಕೋಟಿ ಗ್ರಾಹಕರನ್ನು ತಲುಪಿದೆ. ಇನ್ನು ಮುಂದೆ ಉಚಿತ ಡೇಟಾ ಸೇವೆ ನೀಡಲು ಸಾಧ್ಯವಿಲ್ಲ. ಕಡಿಮೆ ಹಣದಲ್ಲಿ ಹೆಚ್ಚು ಡೇಟಾ ಪಡೆಯಬೇಕಾದರೆ ಗ್ರಾಹಕರು ಜಿಯೋ ಪ್ರೈಂ ಸದಸ್ಯರಾಗಬೇಕು. 99 ರೂ. ನೀಡಿ ಮಾರ್ಚ್ 31ರ ಒಳಗಡೆ ಪ್ರೈಂ ಸದಸ್ಯರಾದವರಿಗೆ ಕಡಿಮೆ ಬೆಲೆಯಲ್ಲಿ ಡೇಟಾ ನೀಡಲಾಗುವುದು ಎಂದು ತಿಳಿಸಿದ್ದರು.
ಜಿಯೋ ಡೆಡ್‍ಲೈನ್ ವಿಸ್ತರಿಸುವುದು ಹೊಸದೇನಲ್ಲ. ಈ ಹಿಂದೆ ಡಿಸೆಂಬರ್ 31ರ ವರೆಗೆ ಉಚಿತ ಡೇಟಾ ನೀಡುವುದಾಗಿ ಹೇಳಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಿಸಿ 1 ಜಿಬಿ ಉಚಿತ ಡೇಟಾ ನೀಡುವುದಾಗಿ ಪ್ರಕಟಿಸಿತ್ತು. ಹೀಗಾಗಿ ಜಿಯೋ ಪ್ರೈಂ ಸಬ್‍ಸ್ಕ್ರಬ್ ಡೆಡ್‍ಲೈನ್ ಅವಧಿಯನ್ನು ಮಾರ್ಚ್ 31ರ ನಂತರವೂ ವಿಸ್ತರಿಸಬಹುದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


