ಜಿಯೋ ಪ್ರೈಮ್ ಪ್ಲಾನ್ ಗೆ ಏರ್ಟೆಲ್ ಮಾಸ್ಟರ್ ಪ್ಲಾನ್: ಕೇವಲ 345 ರು.ಗೆ 28 ಜಿಬಿ ಡಾಟಾ!
ತೀರಾ ಅಗ್ಗದ ಡಾಟಾ ಪ್ಲಾನ್ ನೀಡುವ ಮೂಲಕ ಮೊಬೈಲ್ ಸಂಪರ್ಕ ಮಾರುಕಟ್ಟೆ ಮೇಲೆ ಅಧಿಪತ್ಯ ಸಾಧಿಸಿರುವ ಜಿಯೋ ಪ್ರಾಬಲ್ಯವನ್ನು ಮುರಿಯುವ ಸಲುವಾಗಿ ಹರಸಾಹಸ ಪಡುತ್ತಿರುವ ಏರ್ ಟೆಲ್ ಇದೀಗ ತನ್ನ ಗ್ರಾಹಕರಿಗೆ ಕೇಲಸ 345 ರು.ಗೆ ಬರೊಬ್ಬರಿ 28 ಜಿಬಿ ಡಾಟಾ ನೀಡಲು ಮುಂದಾಗಿದೆ.

ಮುಂಬೈ: ತೀರಾ ಅಗ್ಗದ ಡಾಟಾ ಪ್ಲಾನ್ ನೀಡುವ ಮೂಲಕ ಮೊಬೈಲ್ ಸಂಪರ್ಕ ಮಾರುಕಟ್ಟೆ ಮೇಲೆ ಅಧಿಪತ್ಯ ಸಾಧಿಸಿರುವ ಜಿಯೋ ಪ್ರಾಬಲ್ಯವನ್ನು ಮುರಿಯುವ ಸಲುವಾಗಿ ಹರಸಾಹಸ ಪಡುತ್ತಿರುವ ಏರ್ ಟೆಲ್ ಇದೀಗ ತನ್ನ ಗ್ರಾಹಕರಿಗೆ ಕೇಲಸ 345 ರು.ಗೆ ಬರೊಬ್ಬರಿ 28 ಜಿಬಿ ಡಾಟಾ ನೀಡಲು ಮುಂದಾಗಿದೆ.
ಈ ಹಿಂದೆ ಜಿಯೋ ಘೋಷಣೆ ಮಾಡಿದ್ದಂತೆ 303 ರುಗೆ. 28 ಜಿಬಿ ಡಾಟಾ (ಪ್ರತಿನಿತ್ಯ 1 ಜಿಬಿ ಡಾಟಾ) ಮತ್ತು ಅನಿಯಮಿತ ಎಸ್ ಟಿಡಿ, ಲೋಕಲ್ ಕರೆ ಉಚಿತ ಆಫರ್ ಘೋಷಣೆ ಮಾಡಿತ್ತು. ಅಂತೆಯೇ ಏರ್ ಟೆಲ್ ಕೂಡ 345 ಪ್ಲಾನ್ ಬಿಡುಗಡೆ ಮಾಡಿದ್ದು, ಇಲ್ಲಿಯೂ 28 ಜಿಬಿ ಡಾಟಾ ಹಾಗೂ ಅನಿಯಮಿತ ಲೋಕಲ್, ಎಸ್ ಟಿಡಿ ಕರೆಗಳಿವೆಯಾದರೂ, ಏರ್ ಟೆಲ್ ಡಾಟಾ ಬಳಕೆಗೆ ಒಂದಷ್ಟು ನಿಯಂತ್ರಣ ಹೇರಿದೆ. ಈ ಹೊಸ ಪ್ಲಾನ್ ಬಳಕೆದಾರರು ಹಗಲು ವೇಳೆ 500 ಎಂಬಿ ಡಾಟಾ ಮತ್ತು ರಾತ್ರಿ ವೇಳೆ 500 ಎಂಬಿ ಡಾಟಾ ಬಳಕೆ ಮಾಡಬಹುದಾಗಿದೆ. ನಮಗಿಚ್ಛಿಸಿದಾಗ ಡಾಟಾ ಬಳಕೆ ಮಾಡಲು ಬೇರೆ ಪ್ಲಾನ್ ಇದ್ದು 549 ಪ್ಯಾಕ್ ನಲ್ಲಿ ಗ್ರಾಹಕರು ಬೇಕೆಂದಾಗ ಡಾಟಾ ಬಳಕೆ ಮಾಡಬಹುದಾಗಿದೆ.
ಅಂತೆಯೇ ಯಾವ ಗ್ರಾಹಕರು ಮಾರ್ಚ್ 31ರೊಳಗೆ 345 ಪ್ಯಾಕ್ ಮತ್ತು 549 ಪ್ಯಾಕ್ ಗಳನ್ನು ಖರೀದಿ ಮಾಡುತ್ತಾರೆಯೋ ಮುಂದಿನ 12 ತಿಂಗಳವರೆಗೂ ಈ ಆಫರ್ ಚಾಲ್ತಿಯಲ್ಲಿರುತ್ತದೆ.
ಒಟ್ಟಾರೆ ಮೊಬೈಲ್ ಸೇವಾ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಬೇಕು ಎನ್ನುವ ಸಂಸ್ಥೆಗಳ ಸ್ಪರ್ಧೆಯಿಂದಾಗಿ ದಿನಕ್ಕೊಂದು ಆಫರ್ ಗಳು ಬರುತ್ತಿದ್ದು, ಯಾವ ಆಫರ್ ತೆಗೆದುಕೊಳ್ಳಬೇಕು ಎನ್ನುವ ಗೊಂದಲ ಮಾತ್ರ ಗ್ರಾಹಕನದ್ದಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


