ಎಟಿಎಂ ವಿತ್ ಡ್ರಾ ಮಿತಿ 4,500ರಿಂದ 10,000 ರು.ಗೆ ಏರಿಕೆ
500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಉಂಟಾಗಿದ್ದ ನಗದು ಬಿಕ್ಕಟ್ಟನ್ನು ಅವಲೋಕಿಸಿದ ಭಾರತೀಯ...

Published On :
ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಉಂಟಾಗಿದ್ದ ನಗದು ಬಿಕ್ಕಟ್ಟನ್ನು ಅವಲೋಕಿಸಿದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಎಟಿಎಂಗಳ ಮೂಲಕ ದಿನವೊಂದಕ್ಕೆ ವಿತ್‍ಡ್ರಾ ಮಾಡುವ ಹಣದ ಮಿತಿಯನ್ನು 4,500 ರುಪಾಯಿಯಿಂದ 10,000 ರು.ಗೆ ಸೋಮವಾರ ಏರಿಕೆ ಮಾಡಿದೆ.
ಇದೇ ವೇಳೆ ಚಾಲ್ತಿ ಖಾತೆಯಿಂದ ವಿತ್ ಡ್ರಾ ಮಾಡುವ ಹಣದ ಮಿತಿಯನ್ನು ಆರ್ ಬಿಐ ಏರಿಕೆ ಮಾಡಿದ್ದು, ವಾರವೊಂದಕ್ಕೆ ವಿತ್ ಡ್ರಾ ಮಿತಿಯನ್ನು 50,000 ರು.ಯಿಂದ 1,00,000 ವರೆಗೆ ಏರಿಕೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಇಂದು ಸುತ್ತೋಲೆ ಹೊರಡಿಸಿದೆ.
ಈ ಮಧ್ಯೆ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರುಪಾಯಿ ಮಾತ್ರ ಡ್ರಾ ಮಾಡಬಹುದಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ಸ್ಪಷ್ಟುಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


