ವಾಣಿಜ್ಯ

ಬ್ಯಾಂಕ್ ಗಳ ಬಡ್ಡಿ ದರ ಇಳಿಕೆ; ಗೃಹ, ವಾಣಿಜ್ಯ ಸಾಲ ಮತ್ತಷ್ಟು ಅಗ್ಗ!

ನೋಟು ನಿಷೇಧ ಬೆನ್ನಲ್ಲೇ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಸುಧಾರಣಾ ಕ್ರಮಗಳ ಬೆನ್ನಲ್ಲೇ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.

ಬ್ಯಾಂಕ್ ಗಳ ಬಡ್ಡಿ ದರ ಇಳಿಕೆ; ಗೃಹ, ವಾಣಿಜ್ಯ ಸಾಲ ಮತ್ತಷ್ಟು ಅಗ್ಗ!
ಸಂಗ್ರಹ ಚಿತ್ರ
Published On :

ನವದೆಹಲಿ: ನೋಟು ನಿಷೇಧ ಬೆನ್ನಲ್ಲೇ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಸುಧಾರಣಾ ಕ್ರಮಗಳ ಬೆನ್ನಲ್ಲೇ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.

ಹೊಸ ವರ್ಷಾಚರಣೆ ದಿನವೇ ಎಸ್ ಬಿಐ ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ.0.90ರಷ್ಟು ಕಡಿತಗೊಳಿಸಿತ್ತು. ಇದರ ಬೆನ್ನಲ್ಲೇ ಖಾಸಗಿ ಬ್ಯಾಂಕುಗಳು ಕೂಡ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ0.90ರಷ್ಟು ಕಡಿತಗೊಳಿಸಿದ್ದವು.  ಇದೀಗ ಇದೀಗ ಮತ್ತಷ್ಟು ಬ್ಯಾಂಕುಗಳು ಇದೇ ಕ್ರಮವನ್ನು ಅನುಸರಿಸರಿಸಲು ಮುಂದಾಗಿದ್ದು, ಶೇ,0.90ರಿಂದ ಶೇ.1.48ರಷ್ಟು ಬಡ್ಡಿದರವನ್ನು ಕಡಿತಗೊಳಿಸಲು ನಿರ್ಧರಿಸಿವೆ. ಪ್ರಮುಖವಾಗಿ ಐಸಿಐಸಿಐ ಬ್ಯಾಂಕ್, ಓರಿಯಂಟಲ್  ಬ್ಯಾಂಕ್, ಆಂಧ್ರ ಬ್ಯಾಂಕ್ ಗಳು ಬಡ್ಡಿದರವನ್ನು ಕಡಿತಗೊಳಿಸಿದೆ.

ಬಡ್ಡಿದರ ಇಳಿಕೆಯಿಂದಾಗಿ ಬಡ ಹಾಗೂ ಮಧ್ಯಮವರ್ಗದವರಿಗೆ ಅನುಕೂಲವಾಗಲಿದ್ದು, ಸಾಲ ಪಡೆಯುವಿಕೆ ಪ್ರಕ್ರಿಯೆ ಕೂಡ ಸರಳವಾಗಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಎಸ್ ಬಿಐ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ ಅವರು, ಎಸ್ ಬಿಐ ಐದು ಸಹಾಯಕ ಬ್ಯಾಂಕುಗಳು ಹಾಗೂ ಭಾರತೀಯ ಮಹಿಳಾ ಬ್ಯಾಂಕುಗಳನ್ನು ಎಸ್ ಬಿಐನಲ್ಲಿ ವಿಲೀನಗೊಳಿಸುವ ಕುರಿತು ಮಾಹಿತಿ ನೀಡಿದ್ದರು.  ಈ ಬಗ್ಗೆ ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು, ಕೇಂದ್ರ ಸರ್ಕಾರದ ಸೂಚನೆಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ. ತತ್ ಕ್ಷಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಸಾಧ್ಯವಿಲ್ಲ. ಬ್ಯಾಂಕುಗಳ ತಾಂತ್ರಿಕ ತಂಡವನ್ನು  ತುರ್ತುಗಾ ಬದಲಾಯಿಸಲು ಸಾಧ್ಯವಿಲ್ಲ. ಇದೊಂದು ನಿಧಾನದ ಪ್ರಕ್ರಿಯೆಯಾಗಿದ್ದು, ಕ್ರಮೇಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಆರ್ ಬಿಐ ತನ್ನ ವಿತ್ತೀಯ ನೀತಿ ಘೋಷಣೆ ವೇಳೆ ಬಡ್ಡಿದರ ಇಳಿಕೆಯಾಗುವ ಮುನ್ಸೂಚನೆ ನೀಡಿತ್ತು. ಇದೀಗ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬ್ಯಾಂಕ್ ಗಳು ತಮ್ಮ ತಮ್ಮ ಬಡ್ಡಿದರವನ್ನು ಕಡಿತಗೊಳಿಸುತ್ತಿವೆ.  ಇನ್ನು ಇತರೆ ಪ್ರಮುಖ ಬ್ಯಾಂಕುಗಳು ಕೂಡ ಮಾರುಕಟ್ಟೆ ಪೈಪೋಟಿ ತಡೆಯಲು ಬಡ್ಡಿದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.