ಟ್ರಂಪ್ ಬಿರುಗಾಳಿ ಬಳಿಕ ಚೇತರಿಸಿಕೊಂಡ ಐಟಿ ವಲಯ; ಸೆನ್ಸೆಕ್ಸ್ 125 ಅಂಕಗಳ ಏರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ 1ಬಿ ವೀಸಾ ವಿತರಣೆ ನಿಯಮ ಮರು ಪರಿಶೀಲನೆ ಬಳಿಕ ಕುಸಿದಿದ್ದ ಐಟಿವಲಯದ ಷೇರುಗಳು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಸೆನ್ಸೆಕ್ಸ್ 125 ಅಂಕಗಳ ಏರಿಕೆ ಕಂಡಿದೆ.

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ 1ಬಿ ವೀಸಾ ವಿತರಣೆ ನಿಯಮ ಮರು ಪರಿಶೀಲನೆ ಬಳಿಕ ಕುಸಿದಿದ್ದ ಐಟಿವಲಯದ ಷೇರುಗಳು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಸೆನ್ಸೆಕ್ಸ್ 125 ಅಂಕಗಳ ಏರಿಕೆ ಕಂಡಿದೆ.
ಪ್ರಮುಖವಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಸ್ಥೆಯ ಷೇರು ಮರುಖರೀದಿಯ ಯೋಜನೆ ಘೋಷಣೆಯಿಂದಾಗಿ ಇಂದು ಮಾರುಕಟ್ಟೆಯಲ್ಲಿ ಆಶಾದಾಯಕ ಬೆಳವಣಿಗೆಗಳು ಕಂಡುಬಂದಿದ್ದು, ಸೆನ್ಸೆಕ್ಸ್ 125 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ 28,286 2:35:04 PM2:35:04 PM2:35:04 PMಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ 43 ಅಂಕಗಳ ಏರಿಕೆಯೊಂದಿಗೆ 8,768 ಅಂಕಗಳಿಗೆ ಏರಿಕೆಯಾಗಿದೆ.
ಟಿಸಿಎಸ್ ಸಂಸ್ಥೆಯ ಷೇರುಗಳು ಗರಿಷ್ಟ ಪ್ರಮಾಣದ ಏರಿಕೆ ಕಂಡಿದ್ದು, ಒಟ್ಟು ಶೇ.2.7ರಷ್ಟು ಮೌಲ್ಯ ಹೆಚ್ಚಾಗಿದೆ. ಇದು ಕಳೆದ 7 ತಿಂಗಳಲ್ಲಿಯೇ ಗರಿಷ್ಟ ಪ್ರಮಾಣದ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯ ಕೂಡ ಸಾಕಷ್ಟು ಚೇತರಿಸಿಕೊಂಡಿದ್ದು, ಎಸ್ ಬಿಐ ಸಂಸ್ಥೆಯ ಷೇರುಗಳ ಮೌಲ್ಯ ಶೇ.3ರಷ್ಟು ಏರಿಕೆಯಾಗಿದೆ. ಅಂತೆಯೇ ಟಾಟಾ ಮೋಟಾರ್ಸ್ ಸಂಸ್ಥೆಯ ಷೇರು ಮೌಲ್ಯ ಶೇ.2.7ರಷ್ಟು ಏರಿಕೆಯಾಗಿದ್ದರೆ, ವೈದ್ಯಕೀಯ ವಲಯದ ಡಾ.ರೆಡ್ಡೀಸ್ ಸಂಸ್ಥೆಯ ಷೇರುಗಳ ಮೌಲ್ಯ ಕುಸಿತ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


