2018 ರಲ್ಲಿ ಏರಲಿದೆ ಜಿಡಿಪಿ ದರ, ಆದರೆ ಸಂತಸಕ್ಕೆ ಅಡ್ಡಿಯಾಗಲಿದೆ ಹಣದುಬ್ಬರ!
ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಕುಸಿದಿದ್ದ ಜಿಡಿಪಿ ದರ 2018 ರಲ್ಲಿ ಪುಟಿದೇಳುವ ಸಾಧ್ಯತೆ ಇದೆ.

Published On :
ನವದೆಹಲಿ: ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಕುಸಿದಿದ್ದ ಜಿಡಿಪಿ ದರ 2018 ರಲ್ಲಿ ಪುಟಿದೇಳುವ ಸಾಧ್ಯತೆ ಇದೆ. ಆದರೆ ಜಿಡಿಪಿ ಏರಿಕೆಯ ಸಂತಸಕ್ಕೆ ಹಣದುಬ್ಬರ ಹಾಗೂ ಏರಿಕೆಯಾಗುತ್ತಿರುವ ತೈಲ ದರಗಳು ಅಡ್ಡಿಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
2017 ರಲ್ಲಿ ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯಿಂದ ಜಿಡಿಪಿ ಏರಿಕೆ ಕುಂಠಿತವಾಗಿತ್ತು, ಈ ವರ್ಷದಲ್ಲಿ ಜಿಡಿಪಿ ಚೇತರಿಕೆಯಾಗುವ ಲಕ್ಷಣಗಳಿವೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.5 ರಷ್ಟಾಗುವ ಸಾಧ್ಯತೆ ಇದೆ. ಆದರೆ ತೈಲ ದರ ಯಾವ ರೀತಿಯಲ್ಲಿ ಏರುಪೇರಾಗುತ್ತದೆ ಎಂಬುದು ಮುಖ್ಯವಾಗಲಿದ್ದು, ಕಳೆದ 3 ತಿಂಗಳಲ್ಲಿ ಶೇ.28 ರಷ್ಟು ಏರಿಕೆಯಾಗಲಿದೆ. ಇದೇ ವೇಳೆ ಹಣದುಬ್ಬರವೂ ಜಿಡಿಪಿ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಜಿಡಿಪಿ ಏರಿಕೆಯಾಗುವ ಸಾಧ್ಯತೆಯ ಸಂತಸದ ವಿಷಯಕ್ಕೂ ಹಣದುಬ್ಬರ, ತೈಲ ದರ ಏರಿಕೆ ಅಂಶಗಳು ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


