ವಾಣಿಜ್ಯ

ಯುಕೆ, ಫ್ರ್ಯಾನ್ಸ್ ಹಿಂದಿಕ್ಕಿ 2018ರಲ್ಲಿ ಭಾರತ ಐದನೇ ಅತಿದೊಡ್ಡ ಆರ್ಥಿಕತೆ: ವರದಿ

ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬ್ರಿಟನ್ ಮತ್ತು ಫ್ರಾನ್ಸ್ ನ್ನು ಭಾರತ ಮುಂದಿನ ವರ್ಷ ....

ಯುಕೆ, ಫ್ರ್ಯಾನ್ಸ್ ಹಿಂದಿಕ್ಕಿ 2018ರಲ್ಲಿ ಭಾರತ ಐದನೇ ಅತಿದೊಡ್ಡ ಆರ್ಥಿಕತೆ: ವರದಿ
ಸಾಂದರ್ಭಿಕ ಚಿತ್ರ
Published On :
ಲಂಡನ್: ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬ್ರಿಟನ್ ಮತ್ತು ಫ್ರಾನ್ಸ್ ನ್ನು ಭಾರತ ಮುಂದಿನ ವರ್ಷ ಹಿಂದಿಕ್ಕಲಿದೆ ಎಂದು ಅಧ್ಯಯನವೊಂದು ಹೇಳಿದೆ. ಆರ್ಥಿಕ ಮತ್ತು ವ್ಯವಹಾರಗಳ ಸಂಶೋಧನೆ ಸಲಹೆ ಕೇಂದ್ರದ(ಸಿಇಬಿಆರ್-ಸೆಬರ್) 2018ನೇ ವಿಶ್ವ ಆರ್ಥಿಕ ಲೀಗ್ ವೇದಿಕೆ ಜಾಗತಿಕ ಆರ್ಥಿಕತೆ ಬಗ್ಗೆ ವರದಿ ನೀಡಿದೆ.
ಮುಂದಿನ 15 ವರ್ಷಗಳಲ್ಲಿ ವಿಶ್ವದ 10 ಪ್ರಬಲ ಆರ್ಥಿಕ ರಾಷ್ಟ್ರಗಳಲ್ಲಿ ಭಾರತ ಅತ್ಯಂತ ಪ್ರಾಬಲ್ಯ ಮೆರೆಯಲಿದೆ. ತಾತ್ಕಾಲಿಕ ಆರ್ಥಿಕ ಹಿಂಜರಿಕೆ ಕಂಡರೂ ಕೂಡ ಭಾರತದ ಆರ್ಥಿಕತೆ ವಿಶ್ವಮಟ್ಟದಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ಜೊತೆ ಗಮನ ಸೆಳೆದಿದ್ದು ಮುಂದಿನ ವರ್ಷ ಈ ಎರಡೂ ರಾಷ್ಟ್ರಗಳನ್ನು ಹಿಂದಿಕ್ಕಿ ಡಾಲರ್ ಗಳಲ್ಲಿ ವಿಶ್ವದ 5ನೇ ಅತಿದೊಡ್ಡ ದೇಶವಾಗಿ ಮಾರ್ಪಾಡಾಗಲಿದೆ ಎದು ಸೆಬರ್ ಉಪಾಧ್ಯಕ್ಷ ಡೌಗ್ಲಾಸ್ ಮೆಕ್ವಿಲಿಯಮ್ಸ್ ಹೇಳಿದ್ದಾರೆ.
ನೋಟುಗಳ ಅನಾಣ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಮೇಲಿನ ನಿರ್ಬಂಧದಿಂದ ಭಾರತದ ಆರ್ಥಿಕತೆ ತಾತ್ಕಾಲಿಕ ಹಿಂಜರಿತ ಕಂಡುಬಂದಿದೆ. 2032ರಲ್ಲಿ ಚೀನಾ ಆರ್ಥಿಕತೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಲಿದೆ ಎಂದು ಸೆಬರ್ ಹೇಳಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವ ಉದ್ಯಮದ ಮೇಲೆ ನಿರೀಕ್ಷೆಗಿಂತ ತೀವ್ರತೆ ಕಡಿಮೆಯಾಗಿರುವುದರಿಂದ ಅಮೆರಿಕಾದ ಆರ್ಥಿಕ ಬೆಳವಣಿಗೆ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.