ವಾಣಿಜ್ಯ

ಆಮದು ಸುಂಕ ಹೆಚ್ಚಳ ಎಫೆಕ್ಟ್, ಭಾರತದಲ್ಲಿ ಐಫೋನ್ ಬೆಲೆ ಏರಿಸಿದ ಆಪಲ್

ಕೇಂದ್ರ ಸರ್ಕಾರ ಕಳೆದ ವಾರ ಮೊಬೈಲ್ ಫೋನ್ ಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಿದ ಪರಿಣಾಮ....

ಆಮದು ಸುಂಕ ಹೆಚ್ಚಳ ಎಫೆಕ್ಟ್, ಭಾರತದಲ್ಲಿ ಐಫೋನ್ ಬೆಲೆ ಏರಿಸಿದ ಆಪಲ್
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಕೇಂದ್ರ ಸರ್ಕಾರ ಕಳೆದ ವಾರ ಮೊಬೈಲ್ ಫೋನ್ ಗಳ ಮೇಲಿನ ಆಮದು ಸುಂಕವನ್ನು  ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಿದ ಪರಿಣಾಮ ಆಪಲ್ ಕಂಪನಿಯು ಭಾರತದಲ್ಲಿ ತನ್ನ ಐಫೋನ್ ಗಳ ಬೆಲೆ ಏರಿಕೆ ಮಾಡಿದೆ. 
ಐಫೋನ್ ಎಸ್ ಇ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಮೊಬೈಲ್ ಗಳ ಮೇಲಿನ ಬೆಲೆ ಶೇ.3.5ರಷ್ಟು ಹೆಚ್ಚಳ ಮಾಡಲಾಗಿದೆ. ಐಫೋನ್ ಎಸ್ ಇ ಅನ್ನು ಬೆಂಗಳೂರಿನಲ್ಲೇ ಅಸೆಂಬಲ್ ಮಾಡುವುದರಿಂದ ಈ ಸ್ಮಾರ್ಟ್ ಫೋನ್ ದರ ಏರಿಕೆಯಾಗಿಲ್ಲ.
256 ಜಿಬಿ ಐಫೋನ್ ಎಕ್ಸ್ ಮೊಬೈಲ್ ಬೆಲೆ ಈಗ 3000-3500 ರುಪಾಯಿ ಹೆಚ್ಚಳವಾಗಿದೆ. ಐಫೋನ್ 6 ಮತ್ತು 6ಎಸ್ ಗಳ ಮೇಲಿನ ದರ ಕೂಡ 1500 ರುಪಾಯಿ ಏರಿಕೆ ಕಂಡಿದೆ.
ಬೆಲೆ ಏರಿಕೆಯನ್ನು ಆಪಲ್ ಕಂಪನಿ ಖಚಿತಪಡಿಸಿದ್ದು, ಇಂದಿನಿಂದ್ಲೇ ಹೊಸ ಬೆಲೆ ಜಾರಿಯಾಗಲಿದೆ. ಆ್ಯಪಲ್ ಕಂಪನಿಯ ವೆಬ್ ಸೈಟ್ ನಲ್ಲಿ ಕೂಡ ಪರಿಷ್ಕೃತ ದರವನ್ನು ಅಪ್ಡೇಟ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.