ಏರ್ ಟೆಲ್ ಗ್ರಾಹಕನಿಗೆ ಬಂತು 1.86 ಲಕ್ಷ ರೂ ಬಿಲ್!
ಲಕ್ಷಗಟ್ಟಲೆ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಬಂದಿರುವ ವರದಿಗಳನ್ನು ನೋಡಿರುತ್ತೀರಿ, ಕೇಳಿರುತ್ತೀರಿ, ಆದರೆ ಇಲ್ಲೊಂದು ಘಟನೆಯಲ್ಲಿ ಏರ್ ಟೆಲ್ ಗ್ರಾಹಕರೊಬ್ಬರಿಗೆ 1.86 ಬಿಲ್ ಕಳಿಸಿದೆ.

Published On :
ನವದೆಹಲಿ: ಲಕ್ಷಗಟ್ಟಲೆ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಬಂದಿರುವ ವರದಿಗಳನ್ನು ನೋಡಿರುತ್ತೀರಿ, ಕೇಳಿರುತ್ತೀರಿ, ಆದರೆ ಇಲ್ಲೊಂದು ಘಟನೆಯಲ್ಲಿ ಏರ್ ಟೆಲ್ ಗ್ರಾಹಕರೊಬ್ಬರಿಗೆ 1.86 ಲಕ್ಷ ಬಿಲ್ ಕಳಿಸಿದೆ.
ಇಂಡಿಯಾ ಟುಡೆ ಟೆಕ್ ವರದಿಯ ಪ್ರಕಾರ ನಿತಿನ್ ಸೇಥಿ ಎಂಬ ನವದೆಹಲಿಯ ನಿವಾಸಿಯೊಬ್ಬರಿಗೆ ಏರ್ ಟೆಲ್ ನಿಂದ 1.86 ಬಿಲ್ ಬಂದಿದ್ದು, ಬಿಲ್ ನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಜೂ.8-ಜು.7 ನಡುವಿನ ಅವಧಿಗೆ 1.86 ಲಕ್ಷ ಬಿಲ್ ಬಂದಿದೆ. ಆದರೆ ಇದನ್ನು ತಾಂತ್ರಿಕ ದೋಷ ಎಂದು ಏರ್ ಟೆಲ್ ಹೇಳಿದೆ.
ರಜೆಯ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ದುಬೈ ಗೆ ತೆರಳಿದ್ದ ನಿತಿನ್ ಸೇಥಿ, 10 ದಿನಗಳ ಇಂಟರ್ ನ್ಯಾಷನಲ್ ರೋಮಿಂಗ್ ಪ್ಯಾಕ್ ಹಾಕಿಸಿದ್ದರು. ಆದರೆ ಅದು ಭಾರತಕ್ಕೆ ವಾಪಸ್ ಬಂದ ನಂತರವೂ ನಿಂತಿರಲಿಲ್ಲ. ಈಗ ಮಾಧ್ಯಮಗಳಲ್ಲಿ ಬೃಹತ್ ಪ್ರಮಾಣದ ಬಿಲ್ ಬಗ್ಗೆ ವರದಿಗಳಾದ ನಂತರ ಏರ್ ಟೆಲ್ ಸಂಸ್ಥೆ ಸಮಸ್ಯೆಯನ್ನು ಸರಿಪಡಿಸುವುದಕ್ಕೆ ಒಪ್ಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


