ಬಿ.ಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ಬಿಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

Published On :
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ಬಿಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮೂರು ವರ್ಷ ಅಧಿಕಾರದಲ್ಲಿರಲಿದ್ದು, ಕರೆನ್ಸಿ ಮ್ಯಾನೇಜ್ ಮೆಂಟ್, ಸಾಲ ನಿರ್ವಹಣೆ, ಪಾವತಿ ಮತ್ತು ಠರಾವಣೆ ವ್ಯವಹಾರಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಮಾ.11 ರಂದು ಬಿಪಿ ಕನುಂಗೊ ಅವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆರ್ ಬಿ ಐ ನಲ್ಲಿ ನಾಲ್ವರು ಡೆಪ್ಯುಟಿ ಗೌರ್ನರ್ ಗಳಿರಲಿದ್ದು ಆರ್ ಗಾಂಧಿ ಅವರ ಸ್ಥಾನಕ್ಕೆ ಕನುಂಗೊ ಅವರನ್ನು ನೇಮಕ ಮಾಡಲಾಗಿದೆ.
1982 ರಿಂದ ಆರ್ ಬಿಐ ನಲ್ಲಿ ಕಾರ್ಯನಿರ್ವಹಿಸಿರುವ ಕನುಂಗೊ ವಿದೇಶಿ ವಿನಿಮಯ ನಿರ್ವಹಣೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


