ವಾಣಿಜ್ಯ

ಫೋರ್ಬ್ಸ್ ಪಟ್ಟಿ: ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ಉದ್ಯಮಿ, ದಿಲೀಪ್ ಸಾಂಘ್ವಿಗೆ 2ನೇ ಸ್ಥಾನ

ಸತತ 9ನೇ ವರ್ಷ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿ ಎಂಬ...

ಫೋರ್ಬ್ಸ್ ಪಟ್ಟಿ: ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ಉದ್ಯಮಿ, ದಿಲೀಪ್ ಸಾಂಘ್ವಿಗೆ 2ನೇ ಸ್ಥಾನ
ಮುಕೇಶ್ ಅಂಬಾನಿ-ದಿಲೀಪ್ ಸಾಂಘ್ಲಿ
Published On :
ಸಿಂಗಾಪುರ: ಸತತ 9ನೇ ವರ್ಷ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದು ಅವರ ಒಟ್ಟಾರೆ ಸಂಪತ್ತು ಮೌಲ್ಯ 22.7 ಶತಕೋಟಿ ಡಾಲರ್ ಆಗಿದೆ. 
ಅಮೆರಿಕಾದ ವಾಣಿಜ್ಯ ಮ್ಯಾಗಜೀನ್ ಫೋರ್ಬ್ಸ್ ನಡೆಸಿದ ದೇಶದ 100 ಶ್ರೀಮಂತ ಉದ್ಯಮಿಗಳ ಸಮೀಕ್ಷೆಯಲ್ಲಿ ಸನ್ ಫಾರ್ಮಾದ ದಿಲೀಪ್ ಸಾಂಘ್ವಿ 2ನೇ ಅತಿ ದೊಡ್ಡ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಅವರ ಸಂಪಾದನೆ ಮೌಲ್ಯ 16.9 ಶತಕೋಟಿ ರೂಪಾಯಿಯಾಗಿದೆ.
ಹಿಂದುಜಾ ಕುಟುಂಬದವರು ಮೂರನೇ ಸ್ಥಾನ  ಪಡೆದುಕೊಂಡಿದ್ದಾರೆ. ಅವರ ವಾರ್ಷಿಕ ಗಳಿಕೆ 15.2 ಶತಕೋಟಿ ಡಾಲರ್ ಆಗಿದ್ದು, ವಿಪ್ರೋದ ಅಜೀಂ ಪ್ರೇಮ್ ಜಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಅವರ ಸಂಪತ್ತಿನ ಮೌಲ್ಯ 15 ಶತಕೋಟಿ ಆಗಿದೆ.
ಯೋಗ ಗುರು ಬಾಬಾ ರಾಮದೇವ್ ಅವರಿಗೆ ಆಪ್ತರಾಗಿರುವ ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ ಈ ವರ್ಷ ಆಶ್ಚರ್ಯಕರ ರೀತಿಯಲ್ಲಿ 48ನೇ ಸ್ಥಾನ ಗಳಿಸಿದ್ದಾರೆ. 
ಭಾರತದ 100 ಶ್ರೀಮಂತ ಉದ್ಯಮಿಗಳ ಒಟ್ಟಾರೆ ಗಳಿಕೆ ಮೌಲ್ಯ 381 ಶತಕೋಟಿ ಡಾಲರ್ ಆಗಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಜಾಸ್ತಿಯಾಗಿದೆ. ಕಳೆದ ವರ್ಷ ಈ ಮೌಲ್ಯ 345 ಶತಕೋಟಿ ಡಾಲರ್ ಆಗಿತ್ತು. 
ಮುಕೇಶ್ ಅಂಬಾನಿಯವರ ಸಂಪತ್ತು ಮೌಲ್ಯ ಕಳೆದ ವರ್ಷ 18.9 ಶತಕೋಟಿ ಡಾಲರ್ ಆಗಿತ್ತು. ರಿಲಯನ್ಸ್ ಇಂಡಸ್ಟ್ರಿಸ್ ನ ಷೇರು ಬೆಲೆ ಶೇಕಡಾ 21ರಷ್ಟು ಹೆಚ್ಚಾಗಿದ್ದು ಇತ್ತೀಚೆಗೆ 4ಜಿ ಮೊಬೈಸ್ ಸೇವೆ ಒದಗಿಸುವ ಮೂಲಕ ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಜಗತ್ತಿನ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ 36ನೇ ಸ್ಥಾನ. ಅವರ ಸೋದರ ಅನಿಲ್ ಅಂಬಾನಿ 32ನೇ ಸ್ಥಾನ ಗಳಿಸಿದ್ದು ಅವರ ಸಂಪತ್ತು ಮೌಲ್ಯ 3.4 ಶತಕೋಟಿ ಡಾಲರ್ ಆಗಿದೆ. ಇವರು ಕಳೆದ ವರ್ಷ 29ನೇ ಸ್ಥಾನದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.