ರಿಲಯನ್ಸ್ ಜಿಯೋ ಸಂಪರ್ಕಕ್ಕಾಗಿ ಪ್ರಿಯಾಂಕಾ ಚೋಪ್ರಾ ಅರ್ಜಿ, ವೈರಲ್
ಅತ್ಯಧ್ಬುತ ಕೊಡುಗೆಗಳನ್ನು ನೀಡುವ ಮೂಲಕ ದೇಶಾದಾದ್ಯಂತ ಸಂಚಲ ಮೂಡಿಸಿರುವ ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ...

ಅತ್ಯಧ್ಬುತ ಕೊಡುಗೆಗಳನ್ನು ನೀಡುವ ಮೂಲಕ ದೇಶಾದಾದ್ಯಂತ ಸಂಚಲ ಮೂಡಿಸಿರುವ ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಿಯಾಂಕಾ ಚೋಪ್ರಾ ಅವರು ಜಿಯೋ ಸಂಪರ್ಕಕ್ಕಾಗಿ ಸಲ್ಲಿಸಿರುವ ಅರ್ಜಿ ಇದೀಗ ಟ್ವೀಟರ್ ಹಾಗೂ ವಾಟ್ಸ್ಆಪ್ ನಲ್ಲಿ ವೈರಲ್ ಆಗುತ್ತಿದೆ. ಚೋಪ್ರಾರ ಅರ್ಜಿಯನ್ನು ಜನರು ಇನ್ನಿಲ್ಲದಂತೆ ಶೇರ್ ಮಾಡುತ್ತಿದ್ದಾರೆ.
ಎಬಿಸಿ ಟಿವಿ ಸೀರಿಸ್ ಕ್ವಾಂಟಿಕೋಗಾಗಿ ಅಮೆರಿಕಾದಲ್ಲಿ ಶೂಟಿಂಗ್ ನಲ್ಲಿರುವ ಪ್ರಿಯಾಂಕಾ ಚೋಪ್ರಾರು ನಿಜವಾಗಿಯೂ ಜಿಯೋ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದಾರಾ? ಎಂಬುದನ್ನು ಪರಿಶೀಲಿಸದೆ ಜನರು ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡುತ್ತಿದ್ದಾರೆ. ಅರ್ಜಿಯಲ್ಲಿ ಪ್ರಿಯಾಂಕಾ ಚೋಪ್ರಾರ ಪಾಸ್ ಪೋರ್ಟ್ ಫೋಟೋ ಹಾಗೂ ಸಹಿ ಹಾಗೂ ಇನ್ನಿತರ ವಿವರಗಳು ಅರ್ಜಿಯಲ್ಲಿ ನಮೂದಿಸಲಾಗಿದೆ.
ರಿಲಯನ್ಸ್ ನ ಮೊಬೈಲ್ ಟೆಲಿಕಾಂ ಸೇವೆ ಹಾಗೂ ಜಿಯೋ 4ಜಿ ಸೇವೆಗಳನ್ನು ಗಣೇಶ ಚತುರ್ಥಿ ದಿನದಂದು ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಕೇಶ್ ಅಂಬಾನಿ ಚಾಲನೆ ನೀಡಿದರು. ರಿಲಯನ್ಸ್ ಸೇವೆ ಆರಂಭಗೊಂಡ ಹಿನ್ನೆಲೆ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ನೀತು ಅಂಬಾನಿ ಹಾಗೂ ಮುಕೇಶ್ ಅಂಬಾನಿಗೆ ಶುಭಾಶಯ ಕೋರಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಚೋಪ್ರಾರ ಅರ್ಜಿ ವೈರಲ್ ಆಗುತ್ತಿದ್ದರು ಈ ಕುರಿತು ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ಹಾಗೂ ಸ್ಪಷ್ಠಿಕರಣ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


