ರಿಲಾಯನ್ಸ್ ಜಿಯೋ ಎಫೆಕ್ಟ್: ಭರ್ಜರಿ ಆಫರ್ ನೀಡಲು ಮುಂದಾದ ಬಿಎಸ್ ಎನ್ ಎಲ್
ರಿಲಾಯನ್ಸ್ ಜಿಯೋ ಟೆಲಿಕಾಂ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿರುವುದರಿಂದ ಇತರ ಟೆಲಿಕಾ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ...

ನವದೆಹಲಿ: ರಿಲಾಯನ್ಸ್ ಜಿಯೋ ಟೆಲಿಕಾಂ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿರುವುದರಿಂದ ಇತರ ಟೆಲಿಕಾ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.
ಹೀಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಎಸ್‌ಎನ್‌ಎಲ್ ಇತರ ಟೆಲಿಕಾಂ ಸಂಸ್ಥೆಗಳಿಗಿಂತ ಮುಂಚೆಯೇ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಗ್ರಾಹಕರು ಪೋರ್ಟಿಂಗ್ ಮೂಲಕ ರಿಲಾಯನ್ಸ್ ಜಿಯೋ ಗೆ ತೆರಳದಂತೆ ಮಾಡಲು ಕಂಪನಿಗಳು ಕಸರತ್ತು ಮಾಡುತ್ತಿವೆ.
ಬಿಎಸ್‌ಎನ್‌ಎಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಭಾರೀ ಆಫರ್ ಘೋಷಿಸಿದ್ದು, ಕೇವಲ 249 ರೂಪಾಯಿಗಳಿಗೆ ಅನಿಯಮಿತ ಡೇಟಾ ಸೌಲಭ್ಯ ನೀಡುವುದಾಗಿ ಹೇಳಿದೆ. ‘Experience Unlimited BB 249’ ಹೆಸರಿನ ಈ ಪ್ಲಾನ್ ಸೆಪ್ಟೆಂಬರ್ 9 ರಿಂದ ಜಾರಿಗೆ ಬರಲಿದೆ ಎಂದು ಬಿಎಸ್ಎನ್ ಎಲ್ ಅಧ್ಯಕ್ಷೆ ಅನುಪಮಾ ಶ್ರೀವಾತ್ಸವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
249 ರೂ ಪ್ಲಾನ್ ಅನ್ನು ಒಂದು ತಿಂಗಳ ವರೆಗೆ ಅಂಥ ಗ್ರಾಹಕರು 300 ಜಿಬಿ ವರೆಗೆ ಡೇಟಾ ಬಳಸಬಹುದು. ಗ್ರಾಹಕರಿಗೆ ಈ ಕೊಡುಗೆಯಿಂದಾಗಿ ಪ್ರತಿ ಜಿಬಿ ಡೇಟಾಗೆ 1 ರೂ.ಗಿಂತಲೂ ಕಡಿಮೆ ವೆಚ್ಚ ತಗುಲಲಿದೆ. 2 ಎಂಬಿಪಿಎಸ್ ವೇಗದಲ್ಲಿ ಡೇಟಾ ದೊರೆಯಲಿದೆ ಎನ್ನಲಾಗಿದ್ದು, ಮೊಬೈಲ್ ಬಳಕೆದಾರರ ಕರೆ ದರಗಳಲ್ಲೂ ಬಿಎಸ್‌ಎನ್‌ಎಲ್ ಕಡಿತಗೊಳಿಸುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


