ವಾಣಿಜ್ಯ

ಆನ್ ಲೈನ್ ನಲ್ಲಿ ಜಿಯೋ ಸಿಮ್ ಖರೀದಿ ಮಾಡುವವರೇ ಎಚ್ಚರ!

http://aonebiz.in/ ಎಂಬ ಆನ್‌ಲೈನ್ ಕಂಪನಿ ರಿಲಯನ್ಸ್ ಜಿಯೋ ಸಿಮ್‌‌ಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಮಾರಾಟ ...

ಆನ್ ಲೈನ್ ನಲ್ಲಿ ಜಿಯೋ ಸಿಮ್ ಖರೀದಿ ಮಾಡುವವರೇ ಎಚ್ಚರ!
ಸಂಗ್ರಹ ಚಿತ್ರ
Published On :

ನವದೆಹಲಿ: http://aonebiz.in/ ಎಂಬ ಆನ್‌ಲೈನ್ ಕಂಪನಿ ರಿಲಯನ್ಸ್ ಜಿಯೋ ಸಿಮ್‌‌ಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಮಾರಾಟ ಮಾಡುತ್ತಿದೆ.

ಜಿಯೋ ಸಿಮ್ ಕಾರ್ಡ್ ಪಡೆಯಲು ಗ್ರಾಹಕರಿಂದ ಆನ್‌‌ಲೈನ್‌‌ನಲ್ಲಿರುವ ಫಾರ್ಮ್‌‌‌ನಲ್ಲಿ ಗ್ರಾಹಕರು ಹೆಸರು, ದೂರವಾಣಿ ಸಂಖ್ಯೆ ಹಾಗೂ ಸಿಮ್ ಡೆಲಿವರಿ ಮಾಡುವ ವಿಳಾಸ, ಇ ಮೇಲ್ ಐಡಿ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ಡೆಲಿವರಿ ಶುಲ್ಕದ ರೀತಿಯಲ್ಲಿ 199 ರೂಪಾಯಿ ಪಡೆದುಕೊಳ್ಳುತ್ತಿದೆ.

ಆದರೆ ಸಿಮ್ ಜತೆಗೆ ರಿಲಯನ್ಸ್ ಕಂಪನಿಯ ರಿಲಯನ್ಸ್ ಜಿಯೋ ಡೋಂಗಲ್ (1,999 ರೂ.) ಹಾಗೂ ರಿಲಯನ್ಸ್ ಜಿಯೋ ವೈ ಫೈ ಡೋಂಗಲ್ (2,199) ಅನ್ನು ಡೆಲಿವರಿ ಮಾಡುವುದಾಗಿಯೂ ವೆಬ್ ಸೈಟ್ ಹೇಳಿಕೊಂಡಿದೆ.

ಇವುಗಳ ಖರೀದಿಗೆ ಗ್ರಾಹಕರು ಮೊದಲೇ 2,199 ರು. ಆನ್‌ಲೈನ್‌ ಪೇಮೆಂಟ್ ಮಾಡಬೇಕಾಗುತ್ತಿದೆ. ಅಲ್ಲಿ ನೀವು ಮೋಸ ಹೋಗುವುದು ಖಚಿತ. ಯಾಕೆಂದರೆ ಇಲ್ಲಿಯವರೆಗೆ ರಿಲಿಯನ್ಸ್‌ ಜಿಯೋ ಯಾವುದೇ ಆನ್‌‌‌‌‌‌‌‌‌ಲೈನ್ ಅಥವಾ ಹೋಮ್ ಡೆಲಿವರಿ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿಲ್ಲ. ಈ ವೆಬ್ ಸೈಟ್ ನಿಂದ ಮೋಸ ಹೋದವರು ಇದೀಗ ವಾಟ್ಸಪ್, ಇ ಮೇಲ್ ಹಾಗೂ ಎಸ್‌ಎಂಎಸ್‌ಗಳ ಮೂಲಕ ಬಯಲಿಗೆಳೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.