ಕೇವಲ 26 ದಿನಗಳಲ್ಲಿ 16 ಮಿಲಿಯನ್ ಗ್ರಾಹಕರನ್ನು ಪಡೆದ ಜಿಯೋ!
ರಿಲಾಯನ್ಸ್ ಸಂಸ್ಥೆ ಜಿಯೋ ಸೇವೆಯನ್ನು ಪ್ರಾರಂಭಿಸಿದ ಒಂದು ತಿಂಗಳ ಒಳಗಾಗಿ ಬರೋಬ್ಬರಿ 16 ಮಿಲಿಯನ್ ಗ್ರಾಹಕರನ್ನು ಪಡೆದಿದೆ.

ಮುಂಬೈ: ರಿಲಾಯನ್ಸ್ ಸಂಸ್ಥೆ ಜಿಯೋ ಸೇವೆಯನ್ನು ಪ್ರಾರಂಭಿಸಿದ ಒಂದು ತಿಂಗಳ ಒಳಗಾಗಿ ಬರೋಬ್ಬರಿ 16 ಮಿಲಿಯನ್ ಗ್ರಾಹಕರನ್ನು ಪಡೆದಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಂಸ್ಥೆ, ಭಾರತದಾದ್ಯಂತ ಜಿಯೋ ಸೇವೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಯೊಬ್ಬ ಭಾರತೀಯರಿಗೂ ಡೇಟಾ ಸೌಲಭ್ಯ ಒದಗಿಸಲು ಜಿಯೋ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ.
ಜಿಯೋ ಸೇವೆಗೆ ಹೆಚ್ಚಿನ ಬೇಡಿಕೆ ಇದ್ದು, ಗ್ರಾಹಕರು ಜಿಯೋ ಸೇವೆಗಳ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಳ್ಳುತ್ತಿದ್ದಾರೆ. ಗ್ರಾಹಕರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸುಧಾರಣೆ ತರಲು ಪ್ರತಿ ದಿನವೂ ಶ್ರಮಿಸುತ್ತಿರುವುದಾಗಿ ಜಿಯೋ ಸಂಸ್ಥೆಯ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಸೇವೆ ಪ್ರಾರಂಭವಾದ 26 ದಿನಗಳಲ್ಲಿ 16 ಮಿಲಿಯನ್ ಗ್ರಾಹಕರನ್ನು ಪಡೆಯುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದ್ದು, ಯಾವುದೇ ಇತರ ನೆಟ್ವರ್ಕ್ ಗಿಂತ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಪಡೆದಿದೆ, ಅಷ್ಟೇ ಅಲ್ಲದೆ ಫೇಸ್ ಬುಕ್ ನಲ್ಲೂ ಅತ್ಯಂತ ಹೆಚ್ಚು ಲೈಕ್ ಗಳು ದೊರೆತಿವೆ ಎಂದು ಅಂಬಾನಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


