ಕಾಲ್ ರೇಟ್ ಆಯ್ತು, ಈಗ ಬ್ರಾಡ್ ಬ್ಯಾಂಡ್ ಮೇಲೆ "ಜಿಯೋ" ಕಣ್ಣು!
ಕಾಲ್ ರೇಟ್ ಮತ್ತು ಮೊಬೈಲ್ ಡಾಟಾ ಯೋಜನೆಗಳನ್ನು ತೀರ ಅಗ್ಗದ ದರಕ್ಕೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಸೇವಾವಲಯವನ್ನು ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ವಿಸ್ತರಣೆ ಮಾಡುವ ಮುನ್ಸೂಚನೆ ನೀಡಿದೆ.

ನವದೆಹಲಿ: ಕಾಲ್ ರೇಟ್ ಮತ್ತು ಮೊಬೈಲ್ ಡಾಟಾ ಯೋಜನೆಗಳನ್ನು ತೀರ ಅಗ್ಗದ ದರಕ್ಕೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಸೇವಾವಲಯವನ್ನು ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ವಿಸ್ತರಣೆ ಮಾಡುವ ಮುನ್ಸೂಚನೆ ನೀಡಿದೆ.
ಮೂಲಗಳ ಪ್ರಕಾರ ರಿಲಯನ್ಸ್ ಜಿಯೋ ತನ್ನ ಮುಂದಿನ ಗುರಿಯಾಗಿ ಬ್ರಾಡ್ ಬ್ಯಾಂಡ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಕನಿಷ್ಠದರಕ್ಕೆ ಅತೀ ಹೆಚ್ಚು ವೇಗದ ಇಂಟರ್ ನೆಟ್ ಸೇವೆ ಒದಗಿಸುವ ಕುರಿತು ಯೋಜನೆ ರೂಪಿಸುತ್ತಿದೆ. ಸಂಸ್ಥೆಯ ಆಂತರಿಕ ವಲಯಗಳು ನೀಡಿರುವ ಮಾಹಿತಿಯಾಧಾರದ ಮೇಲೆ ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ಬ್ರಾಡ್ ಬ್ಯಾಂಡ್ ಸೇವೆ ನೀಡಲಿದ್ದು, ಇದು ದೇಶದ ಅತೀ ವೇಗದ ಇಂಟರ್ ನೆಟ್ ಸೇವೆ ಎಂಬ ಖ್ಯಾತಿಗೆ ಒಳಗಾಗಲಿದೆಯಂತೆ. ಪ್ರತೀ ಸೆಕೆಂಡಿಗೆ 1ಗಿಗಾ ಬೈಟ್ ವೇಗದ ಇಂಟರ್ ನೆಟ್ ಸೆವೆ ಒದಗಿಸುವ ಕುರಿತು ರಿಲಯನ್ಸ್ ಸಂಸ್ಥೆ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಆದರೆ ಮಾರುಕಟ್ಟೆ ತಜ್ಞರ ಪ್ರಕಾರ ರಿಲಯನ್ಸ್ ಜಿಯೋ ಈ ಗುರಿಮುಟ್ಟುವಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಪ್ರಸ್ತುತ ಒದಗಿಸುತ್ತಿರುವ 4ಜಿ ಸೇವೆಯಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ಇದರ ಪರಿಷ್ಕರಣೆಗೆ ರಿಲಯನ್ಸ್ ತಾಂತ್ರಿಕ ತಂಡ ಪರಿಶ್ರಮ ಪಡುತ್ತಿದ್ದು, ಹೀಗಿರುವಾಗ ಮತ್ತೆ ಅಧಿಕ ವೇಗದ ಇಂಟರ್ ನೆಟ್ ಸೇವೆ ಒದಗಿಸುವ ಯೋಜನೆ ಕಾರ್ಯಸಾದುವೇ ಎಂಬ ಪ್ರಶ್ನೆ ಮೂಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


