ವಾಣಿಜ್ಯ

ಏಷ್ಯಾ ಖಂಡದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಬಹುದು: ಅರುಣ್ ಜೇಟ್ಲಿ

ಚೀನಾ ದೇಶ ಆರ್ಥಿಕ ಬೆಳವಣಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದ್ದು, ಬೇರೆ ದೇಶಗಳು ಆ ಸ್ಥಾನವನ್ನು ತುಂಬಲು...

ಏಷ್ಯಾ ಖಂಡದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಬಹುದು: ಅರುಣ್ ಜೇಟ್ಲಿ
ಹಣಕಾಸು ಸಚಿವ ಅರುಣ್ ಜೇಟ್ಲಿ
Published On :

ಟೋಕ್ಯೋ: ಚೀನಾ ದೇಶ ಆರ್ಥಿಕ ಬೆಳವಣಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದ್ದು, ಬೇರೆ ದೇಶಗಳು ಆ ಸ್ಥಾನವನ್ನು ತುಂಬಲು ವಿಶ್ವ ಬಯಸುತ್ತಿದ್ದು, ಭಾರತ ವಿತ್ತೀಯ ಕೊರತೆಯನ್ನು ಹೋಗಲಾಡಿಸಲು ಯೋಜಿತವಾಗಿ ಮೂಲಭೂತ ಸೌಕರ್ಯಗಳಿಗೆ ಖರ್ಚು ಮಾಡಿದರೆ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಹೊಮ್ಮಲು ಸಾಧ್ಯ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಟೋಕ್ಯೋದಲ್ಲಿ ಅವರು ನಿಕ್ಕಿ ಇಂಕ್ ಆಯೋಜಿಸಿದ್ದ ಏಷ್ಯಾದ ಭವಿಷ್ಯ ಕುರಿತ ಸಮ್ಮೇಳನದಲ್ಲಿ ಮಾತನಾಡಿ, ಕಳೆದ ಕೆಲ ವರ್ಷಗಳಲ್ಲಿ ಜಗತ್ತಿನ ಶೇಕಡಾ 50ರಷ್ಟು ಆರ್ಥಿಕ ಬೆಳವಣಿಗೆ ಚೀನಾದಲ್ಲಿ ಆಗಿತ್ತು. ಆದರೆ ಈಗ ಅಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತಿದ್ದು, ಬೇರೆ ರಾಷ್ಟ್ರಗಳು ಅದರ ಸ್ಥಾನವನ್ನು ತುಂಬಬೇಕಾಗಿದೆ.

ನಮ್ಮ ದೇಶದಲ್ಲಿ ಮೂಲಭೂತ ಸೌಕರ್ಯ ಕೊರತೆಯಿದೆ. ಅದನ್ನು ಸುಧಾರಿಸಿ ಖರ್ಚುವೆಚ್ಚವನ್ನು ನಿಭಾಯಿಸಿಕೊಂಡರೆ ವಿಶ್ವದಲ್ಲಿಯೇ ಪ್ರಬಲ ಆರ್ಥಿಕ ದೇಶವಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.

6 ದಿನಗಳ ಜಪಾನ್ ಭೇಟಿಯಲ್ಲಿರುವ ಜೇಟ್ಲಿಯವರು, ಯಾವ ದೇಶವೂ ಇನ್ನೊಂದು ದೇಶವನ್ನು ಬದಲಿ ತುಂಬಲು ಸಾಧ್ಯವಿಲ್ಲ. ಪ್ರಮುಖ ಆರ್ಥಿಕತೆಯ ಹುಟ್ಟುವಿಕೆಗೆ ವಿಶ್ವದಲ್ಲಿ ಸಾಕಷ್ಟು ಅವಕಾಶವಿದೆ ಎಂದು ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.