'ಬ್ರೆಡ್ ತಿಂದರೆ ಕ್ಯಾನ್ಸರ್' ವರದಿ: ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿತ!
ಸಿಎಸ್‌ಇ ವರದಿ ಪ್ರಕಟವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.

ಕೋಲ್ಕತಾ: ಬ್ರೆಡ್, ಬನ್, ಪಿಜ್ಜಾ, ಬರ್ಗರ್ ಹಾಗೂ ಪಾವ್‌ಗಳನ್ನು ತಿಂದರೆ ಮಾರಕ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂಬ ವರದಿ ಪ್ರಕಟವಾಗುತ್ತಿದ್ದಂತೆಯೇ ಬೇಕರಿಗಳಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ.
ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಸಂಸ್ಥೆ ನೀಡಿದ್ದ ಬ್ರೆಡ್, ಬ್ಯಾನ್ ಪಿಜ್ಜಾ, ಬರ್ಗರ್ ಸೇವನೆ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂಬ ವರದಿಯನ್ನು ಮಾಧ್ಯಮಗಳು ಪ್ರಕಟಿಸುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ಬ್ರೆಡ್ ಉತ್ಪಾದನೆ ಕುಸಿದಿದೆ. ವರದಿಯಿಂದ ಜನರಲ್ಲಿ ಆತಂಕ ಮೂಡಿಸಿದ್ದು ಬ್ರೆಡ್ ಉತ್ಪಾದನೆ ಮಾಡುತ್ತಿದ್ದ ಕಾರ್ಖಾನೆಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ ಎಂದು ಪಶ್ಚಿಮ ಬಂಗಾಳ ಬೇಕರ್ಸ್ ಸಂಘಟನೆಯ ಮುಖಂಡ ಹಾಗೂ ಸಂಸದ ಇದ್ರಿಸ್ ಅಲಿ ತಿಳಿಸಿದ್ದಾರೆ.
ವರದಿ ಪ್ರಕಾಟವಾಗುವುದಕ್ಕೂ ಮುನ್ನ ಪ್ರತಿ ದಿನ 10 -12 ಲಕ್ಷ ಪೌಂಡ್ ನಷ್ಟು ಬ್ರೆಡ್ ಉತ್ಪಾದನೆಯಾಗುತ್ತಿತ್ತು. ಈ ಪೈಕಿ ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೆ 5 ಲಕ್ಷ ಪೌಂಡ್ ನಷ್ಟು ಬ್ರೆಡ್ ಅಗತ್ಯವಿರುತ್ತಿತ್ತು. ಆದರೆ ವರದಿ ಪ್ರಕಟವಾದ ನಂತರ ಶೇ.30 ರಷ್ಟು ಬ್ರೆಡ್ ಉತ್ಪಾದನೆ ಕುಸಿತ ಕಂಡಿದೆ ಎಂದು ಬೇಕರ್ಸ್ ಸಮನ್ವಯ ಸಮಿತಿಯ ಕಾರ್ಯದರ್ಶಿ ಶೇಖ್ ಇಸ್ಲಾಮಿಲ್ ಹುಸೇನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


