ವಾಣಿಜ್ಯ

ಏರಿಕೆಯಾಗಲಿರುವ ವಾಹನ ವಿಮೆ ಕಂತು

ಹಣಕಾಸು ವರ್ಷ 2016 ಆರಂಭವಾಗುತ್ತಿದ್ದಂತೆಯೇ ವಾಹನ ವಿಮೆಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ...

ಏರಿಕೆಯಾಗಲಿರುವ ವಾಹನ ವಿಮೆ ಕಂತು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಹಣಕಾಸು ವರ್ಷ 2016 ಆರಂಭವಾಗುತ್ತಿದ್ದಂತೆಯೇ ವಾಹನ ವಿಮೆಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಮೂರನೆ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕಾಗಿರುವುದರಿಂದ ಎಲ್ಲ ವಾಹನಗಳ ವಿಮಾ ಪ್ರೀಮಿಯಂಗಳಲ್ಲಿ ಏರಿಕೆ ಕಾಣಲಿದೆ.

ಸಾವಿರ ಸಿಸಿವರೆಗಿನ ಸಾಮರ್ಥ್ಯದ ಎಂಜಿನ್ ಹೊಂದಿರುವ ಕಾರುಗಳ ವಿಮಾ ಕಂತಿನ ಮೊತ್ತದಲ್ಲಿ ಶೇಕಡಾ 30ರವರೆಗೆ ಏರಿಕೆ ಕಂಡರೆ, ಸಾವಿರ ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಕಾರುಗಳಿಗೆ ಶೇಕಡಾ 25ರವರೆಗೂ ಏರಲಿದೆ. ದ್ವಿಚಕ್ರ ವಾಹನಕ್ಕೆ ಈ ಏರಿಕೆ ಪ್ರಮಾಣ ಶೇಕಡಾ 10ರಿಂದ 25 ಮತ್ತು ವಾಣಿಜ್ಯ ವಾಹನಗಳಿಗೆ ಶೇಕಡಾ 15ರಿಂದ 30ರಷ್ಟು ಇರಲಿದೆ.

ಹಣದುಬ್ಬರಕ್ಕೆ ಅನುಗುಣವಾಗಿ ವಿಮಾ ಕಂತನ್ನು ಪರಿಷ್ಕರಿಸಬೇಕೆಂದು ನಿರ್ಧರಿಸಿದ ನಂತರ ಇದು ಆರನೇ ಬಾರಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ದರ ಹೆಚ್ಚಿಸುತ್ತಿದೆ.

ವಿಮಾ ಕ್ಷೇತ್ರದಲ್ಲಿ ಜೀವ ವಿಮೆ ನಂತರ ವಾಹನ ವಿಮೆ ಎರಡನೇ ಸ್ಥಾನದಲ್ಲಿದೆ. ವಾಹನ ವಿಮೆಯಲ್ಲಿ ಸ್ವಯಂ ಡ್ಯಾಮೇಜ್ ಮತ್ತು ಮೂರನೇ ಪಾರ್ಟಿ ಡ್ಯಾಮೇಜು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.