ವಸ್ತ್ರ ಉದ್ಯಮ ಕ್ಷೇತ್ರಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ಎಂಟ್ರಿ, ಮಾರುಕಟ್ಟೆಗೆ ಸಚಿನ್ ಬ್ರಾಂಡ್
ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವಸ್ತ್ರ ಉದ್ಯಮ ಕ್ಷೇತ್ರ ಪ್ರವೇಶಿಸಿದ್ದಾರೆ...

ಮು೦ಬ್ಯೆ: ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವಸ್ತ್ರ ಉದ್ಯಮ ಕ್ಷೇತ್ರ ಪ್ರವೇಶಿಸಿದ್ದಾರೆ.
ಅರವಿಂದ್ ಫ್ಯಾಷನ್ ಬ್ರಾಂಡ್ಸ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರದೇ ಬ್ರಾಂಡ್ ನ ಪುರುಷರ ಉಡುಪುಗಳು ಶೀಘ್ರವೇ ಮಾರುಕಟ್ಟೆಗೆ ಬರಲಿವೆ. ಕಂಪನಿ ವಿಶೇಷ ವಿನ್ಯಾಸದ ಉಡುಪುಗಳನ್ನು ರೂಪಿಸಲಿದ್ದು, ಇದು ಭಾರತೀಯ ಅ೦ಶಗಳ ಜತೆಗೆ ಆಧುನಿಕ ಸ್ಪಶ೯ವನ್ನೂ ಹೊ೦ದಿರಲಿದೆ ಎ೦ದು ಸಚಿನ್ ತಿಳಿಸಿದ್ದಾರೆ.
ಸುಮಾರು 300 ವಿವಿಧ ಬಗೆಯಲ್ಲಿ ಸಚಿನ್ ವಿನ್ಯಾಸಗೊಳಿಸುವ ಬಟ್ಟೆಗಳು ಲಭ್ಯವಿರಲಿದ್ದು, ಇದರ ಪ್ರಾರಂಭಿಕ ಮೊತ್ತ 1,199 ರುಪಾಯಿಯಾಗಲಿದೆ.
ಈ ಬ್ರಾ೦ಡ್‍ನ ಮಾರಾಟಕ್ಕೆ ಭಾರತದೆಲ್ಲೆಡೆ ಸುಮಾರು 25-30 ಮಳಿಗೆಗಳನ್ನು ಆರ೦ಭಿಸುವ ಯೋಜನೆ ಜತೆಗೆ ಮು೦ದಿನ 5 ವಷ೯ಗಳಲ್ಲಿ ಸುಮಾರು 200 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊ೦ದಲಾಗಿದೆ ಎ೦ದು ಕ೦ಪನಿಯ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


